ಇತ್ತೀಚೆಗೆ ಹಿಂದಿ ಹುಚ್ಚು.. ಕನ್ನಡದ ಕಿಚ್ಚಿನ ಟ್ವೀಟ್ ವಾರ್ಗೆ ಅಜಯ್ ದೇವಗನ್ ಹೆದರುವಂತಾಗಿತ್ತು. ಯಾಕಾದ್ರೂ ಕಿಚ್ಚನನ್ನ ಕೆಣಕಿದ್ನೋ ಅನ್ನುವಂತಾಗಿತ್ತು ಬಿಟೌನ್ ಅಜಯ್ಗೆ. ವಿವಾದ ಸುಖಾಂತ್ಯವಾಯ್ತು ಅಂದುಕೊಳ್ಳೋ ಅಷ್ಟರಲ್ಲೇ ಮತ್ತೆ ಕಾಲ್ಕೆರೆದುಕೊಂಡು ಆಲ್ ಇಂಡಿಯಾ ಕಟೌಟ್ ಎದುರು ತೊಡೆತಟ್ಟಿ ನಿಲ್ತಿದ್ದಾರೆ ಬಿಟೌನ್ ಸ್ಟಾರ್.
- ಮತ್ತೆ ಕಿಚ್ಚನೆದುರಿಗೆ ಕಾಲ್ಕೆರೆದು ಬರ್ತಿದ್ದಾನೆ ದೇವಗನ್..!
- ಬಾಕ್ಸ್ ಆಫೀಸ್ನಲ್ಲಿ ಕಿಚ್ಚನ ರೋಣ v/s ಥ್ಯಾಂಕ್ ಗಾಡ್
ಮೊನ್ನೆಯಷ್ಟೇ ಹಿಂದಿಯನ್ನ ರಾಷ್ಟ್ರೀಯ ಭಾಷೆ ಅಂತ ಕರೆದು, ಕಿಚ್ಚನ ಕೆಣಕೋ ಮೂಲಕ ಇಡೀ ದೇಶದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ರು ಬಾಲಿವುಡ್ ನಟ ಅಜಯ್ ದೇವಗನ್. ಅಲ್ಲದೆ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ರು. ಅದ್ರ ಎಫೆಕ್ಟ್ ರನ್ವೇ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಪ್ರತಿಕೂಲ ಪರಿಣಾಮ ಬೇರೆ ಎದುರಿಸಿದ್ದು ಎಲ್ರಿಗೂ ಗೊತ್ತೇಯಿದೆ.
ಇದೀಗ ಮತ್ತೊಮ್ಮೆ ನಮ್ಮ ಆಲ್ ಇಂಡಿಯಾ ಕಟೌಟ್ ಎದುರು ಕಾಲ್ಕೆರೆದು ಬರ್ತಿದ್ದಾನೆ ಅಜಯ್ ದೇವಗನ್. ಯೆಸ್.. ಈ ಬಾರಿ ಬಾಕ್ಸ್ ಆಫೀಸ್ನಲ್ಲಿ ಫೈಟ್ ಮಾಡೋಕೆ ಅಖಾಡಕ್ಕಿಳಿದಿದ್ದಾನೆ. ಒಂದ್ಕಡೆ ಕಿಚ್ಚ ಸುದೀಪ್ರ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ವರ್ಲ್ಡ್ ರಿಲೀಸ್ ಆಗ್ತಿದೆ. ಮತ್ತೊಂದ್ಕಡೆ ಅದೇ ವಾರದಲ್ಲಿ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಕೂಡ ತೆರೆಗಪ್ಪಳಿಸುತ್ತಿದೆ.
ವಿಕ್ರಾಂತ್ ರೋಣ ಚಿತ್ರ ಫ್ಯಾಂಟಸಿ ಆ್ಯಕ್ಷನ್ ಅಡ್ವೆಂಚರ್. ಇಂಡಿಯನ್ ಲಾಂಗ್ವೇಜಸ್ ಜೊತೆ ಇಂಗ್ಲೀಷ್ನಲ್ಲೂ ತಯಾರಾಗ್ತಿದೆ. ಈ ಸಿನಿಮಾ ಮೇಕಿಂಗ್ ಹಾಗೂ ಟೀಸರ್ಗಳಿಂದ ಭರವಸೆ ಮೂಡಿಸಿದ್ದು, ಎಲ್ಲಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರಾದ ಚಿತ್ರ ಜುಲೈ 28ಕ್ಕೆ ತೆರೆಗೆ ಬರ್ತಿದೆ. ಜುಲೈ 29ಕ್ಕೆ ಥ್ಯಾಂಕ್ ಗಾಡ್ ಕೂಡ ಬರೋಕೆ ಡೆಡ್ಲೈನ್ ಫಿಕ್ಸ್ ಮಾಡಿದೆ.
ಅಜಯ್ ದೇವಗನ್ ಜೊತೆ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ರಕುಲ್ ಪ್ರೀತ್ ಸಿಂಗ್ ಕೂಡ ಕಾಣಸಿಗಲಿದ್ದು, ಕಾಮಿಡಿ ಜಾನರ್ನ ಈ ಸಿನಿಮಾ ಮತ್ತೊಮ್ಮೆ ಬಾಕ್ಸ್ ಆಫೀಸ್ನಲ್ಲಿ ಅಜಯ್ ದೇವಗನ್ಗೆ ಹೊಡೆದ ಕೊಡೋ ಸೂಚನೆ ಸಿಕ್ಕಿದೆ. ಯಾವುದೋ ಕಾರಣಕ್ಕಾಗ ಜಗಳ, ಹೀಗೆ ಸಿನಿಮಾ ರಿಲೀಸ್ ಸಮಯದಲ್ಲಿ ಎಡವಟ್ಟಾಗಲಿದೆ ಅನ್ನೋದನ್ನ ದೇವಗನ್ ಅರಿತುಕೊಳ್ಳಬೇಕಿದೆ. ಕನ್ನಡಿಗರು ಈ ಸಿನಿಮಾನ ತಿರಸ್ಕರಿಸೋ ಮೂಲಕ ತಕ್ಕಪಾಠ ಕಲಿಸಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ