Saturday, November 16, 2024

ಕನ್ನಡಿಗರು- ಮಲಯಾಳಿಗಳ ಕೈಚಳಕದಲ್ಲಿ 21 ಅವರ್ಸ್​

ಇನ್ನೊಂದು ಆರು ತಿಂಗಳು ಹಗಲಿರುಳು ಶೂಟಿಂಗ್ ಮಾಡಿದ್ರೂ ಮುಗಿಯದೇ ಇರೋ ಅಷ್ಟು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಆಗಿದ್ದಾರೆ ಡಾಲಿ ಧನಂಜಯ. ಒಂದ್ಕಡೆ ಹೊಚ್ಚ ಹೊಸ ಪ್ರಯೋಗಗಳು, ಮತ್ತೊಂದ್ಕಡೆ ಪರಭಾಷೆಗಳಿಂದ ಡಿಮ್ಯಾಂಡ್. ಪುಷ್ಪ ಹಾಗೂ ಬಡವ ರಾಸ್ಕಲ್ ಸಕ್ಸಸ್ ಗುಂಗಲ್ಲಿರೋ ಡಾಲಿ, ಸೈಕಲ್ ಗ್ಯಾಪ್​ನಲ್ಲಿ ಮಲಯಾಳಂ ಸಿನಿಮಾವೊಂದನ್ನ ಮಾಡಿ ಮುಗಿಸಿದ್ದಾರೆ.

  • ಬಹುಭಾಷೆಯಲ್ಲಿ ಡಾಲಿ ಖಾಕಿ ಖದರ್.. ಗನ್ ಮೊರೆತ
  • ಸದ್ದಿಲ್ಲದೆ ರಿಲೀಸ್​ಗೆ ರೆಡಿಯಾದ ಮಲಯಾಳಂ ಥ್ರಿಲ್ಲರ್
  • ಕನ್ನಡಿಗರು- ಮಲಯಾಳಿಗಳ ಕೈಚಳಕದಲ್ಲಿ 21 ಅವರ್ಸ್​
  • ಡಾಲಿ ಮುಂದೆ ಕೈ ಕಟ್ಲೇಬೇಕು.. ತಪ್ಪು ಒಪ್ಕೊಳ್ಳೇಬೇಕು ..!

ಟಗರು ಚಿತ್ರದ ಡಾಲಿ ಎಂಬ ಹೆಸರಿನಿಂದ ನೇಮು ಫೇಮ್ ಪಡೆದ ಧನಂಜಯ, ಪುಷ್ಪ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾದಿಂದ ನಿರ್ಮಾಪಕರಾಗಿಯೂ ಬಡ್ತಿ ಪಡೆದ ಡಾಲಿ, ನಟನೆಗೂ ಸೈ, ಪ್ರೊಡಕ್ಷನ್​ಗೂ ಜೈ ಅಂತ ತಮ್ಮ ಅಸಲಿಯತ್ತು ಪ್ರದರ್ಶಿಸಿದ್ರು. ಅಲ್ಲದೆ ಸುಮಾರು ಹತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಬ್ಯುಸಿ ಇರೋ ಡಾಲಿ ಹಗಲಿರುಳು ಶೂಟಿಂಗ್, ಡಬ್ಬಿಂಗ್ ಅಂತ ಕನಸಲ್ಲೂ ಸಿನಿಮಾನೇ ಕನವರಿಸ್ತಿರ್ತಾರೆ.

ಇಷ್ಟೆಲ್ಲಾ ಕಾರ್ಯಗಳ ನಡುವೆ ನನ್ನ ಮುಂದೆ ಕೈ ಕಟ್ಟಲೆಬೇಕು, ತಪ್ಪು ಒಪ್ಪಿಕೊಳ್ಳಲೇಬೇಕು ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಂದಹಾಗೆ ಇದು ಟ್ವೆಂಟಿ ಒನ್ ಅವರ್ಸ್​ ಅನ್ನೋ ಸಿನಿಮಾದ ಪವರ್​ಫುಲ್ ಡೈಲಾಗ್. ಹೌದು.. ಸೈಲೆಂಟ್ ಆಗಿ ಮಲಯಾಳಂ ಹಾಗೂ ಕನ್ನಡ ಹೀಗೆ ದ್ವಿಭಾಷಾ ಚಿತ್ರವೊಂದನ್ನ ಮಾಡಿರೋ ಡಾಲಿ, ಅದ್ರ ಟ್ರೈಲರ್ ಲಾಂಚ್ ಮಾಡಿ, ಇದೇ ಮೇ 20ಕ್ಕೆ ರಿಲೀಸ್ ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ.

ಜೈಶಂಕರ್ ಪಂಡಿತ್ ನಿರ್ದೇಶಿಸಿರೋ ಈ ಚಿತ್ರ ಕೆ.ಆರ್.ಜಿ ಸ್ಟೂಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಧನಂಜಯ ಸೇರಿದಂತೆ ಇಡೀ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯೋ ಕಥೆಯಿದು. ಇಲ್ಲಿ ಡಾಲಿ ಇನ್ವೆಸ್ಟಿಗೇಟೀವ್ ಆಫೀಸರ್ ಆಗಿ ಗನ್ ಹಿಡಿದು ಘರ್ಜಿಸಲಿದ್ದಾರೆ.

ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಖ್ಯಾತ ನಟರು ಅಭಿನಯಿಸಿರೋ ಜಾಹೀರಾತುಗಳನ್ನು ನಿರ್ದೇಶಿಸಿರೋ ಕನ್ನಡದ ಮೂಲದ ಪ್ರತಿಭೆ ಜೈ ಶಂಕರ್ ಪಂಡಿತ್. ಈತ ಇಪ್ಪತ್ತೊಂದು ಗಂಟೆಯಲ್ಲಿ ನಡೆಯೋ ವಿಶೇಷ ಕಥೆಯನ್ನ ದೊಡ್ಡ ಪರದೆಗೆ ತರ್ತಿದ್ದಾರೆ. ಓಲ್ಡ್ ಮಾಂಕ್ ಚಿತ್ರದಲ್ಲಿ ನಟಿಸಿದ್ದ ಸುದೇವ್ ನಾಯರ್, ಉಡುಪಿ ಮೂಲದ ನಟ ರಾಹುಲ್ ಮಾಧವ್ ಚಿತ್ರದ ತಾರಾಗಣದಲ್ಲಿದ್ದಾರೆ.

ಬಾಲಕೃಷ್ಣ ಎನ್.ಎಸ್, ಅಭಿಷೇಕ್ ರುದ್ರಮೂರ್ತಿ, ಸುನೀಲ್ ಗೌಡ, ಹಾಗೂ ಪ್ರವೀಣ್ ಮಹದೇವ್ ನಿರ್ಮಾಣದ ಈ ಸಿನಿಮಾಗೆ ರುಪರ್ಟ್ ಫರ್ನಾಂಡಿಸ್ ಸಂಗೀತ, ತಿರುನವುಕ್ಕರಸು ಛಾಯಾಗ್ರಹಣ, ರಿಚರ್ಡ್ ಕೆವಿನ್ ಸಂಕಲನ ಹಾಗೂ ಪ್ರತಾಪ್ ಆರ್ ಮೆಂಡನ್ ಅವರ ಕಲಾ ನಿರ್ದೇಶನವಿದೆ. ಈ ಚಿತ್ರಕ್ಕೆ ಸುಕೃತ್ ವಿ ಹಾಗೂ ಡಿ.ವಿ.ಬಾಲಸುಬ್ರಹ್ಮಣ್ಯ ಸಂಭಾಷಣೆ ಬರೆದಿದ್ದು, ಪಕ್ಕಾ ಕಂಟೆಂಟ್ ಬೇಸ್ಡ್ ಸಿನಿಮಾ ಆಗಿ ಥ್ರಿಲ್ ನೀಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES