Saturday, November 23, 2024

ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ರದ್ದು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಈ ಕಾರಣದಿಂದಾಗಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು.ಆದರೆ ಹೊಟೇಲ್ ಮತ್ತು ಬಾರ್ ಮಾಲಿಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಚಿವರ ಸಲಹೆಗೆ ಸಿಎಂ ಬೊಮ್ಮಾಯಿ ಸಹಮತ ನೀಡಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಸಿಎಂ ಅಧಿಕೃತ ಘೋಷಣೆಯನ್ನು ಮಾಡಿದ್ದು, ರಾತ್ರಿ 10 ಗಂಟೆ ಬದಲು 11 ಗಂಟೆಯಿಂದ ನೈಟ್‌ ಕರ್ಫ್ಯೂ ಬೆಳಗ್ಗೆ 5ಗಂಟೆವರೆಗೂ ನೈಟ್‌ ಕರ್ಫ್ಯೂ ಸಾಧ್ಯತೆ ಇರಲಿದೆ.ಜನಾಕ್ರೋಶಕ್ಕೆ ಮಣಿದು ವೀಕೆಂಡ್‌ ಕರ್ಫ್ಯೂ ವಾಪಾಸ್ ಮಾಡಿದ್ದಾರೆ.ಸಭೆಯಲ್ಲಿ ಟಿಎಸಿ ಅಧ್ಯಕ್ಷ ಡಾ.ಸುದರ್ಶನ್‌ರಿಂದ ವರದಿ ಸಲ್ಲಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ತೆರವು ಮಾಡಲು ಸಭೆಯಲ್ಲಿ ನಿರ್ಣಯ ಮಾಡಲಾಗಿದ್ದು.ಯೂರೋಪ್ ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ 3ನೇ ಅಲೆ ವ್ಯಾಪಕವಾಗಿ ಹರಡಿದರೂ ತೀವ್ರತೆ ಕಡಿಮೆ ಇದೆ. ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳೋಣ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದರೆ, ಮತ್ತೆ ಬಿಗಿಕ್ರಮ ಮುಂದುವರಿಸೋಣ ಎಂದರು.

 

RELATED ARTICLES

Related Articles

TRENDING ARTICLES