ಬೆಂಗಳೂರು : ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಂಗಳೂರಿನಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದ್ದು, ತರಕಾರಿ ಕೊಂಡುಕೊಳ್ಳಲು ಬಂದ ವೃದ್ಧನ ವಾಹನವನ್ನ ಪೊಲೀಸರು ಸೀಜ್ ಮಾಡಿದ ಘಟನೆ ಬೆಂಗಳೂರಿನ ಕೆ ಆರ್ ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಇದರಿಂದ ಕಂಗಾಲಾದ ವೃದ್ದ ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ನನ್ನ ಬೈಕ್ ಕೊಡಿ, ಹಬ್ಬ ಅಂತ ತರಕಾರಿ ತಗೊಳ್ಳೋಕೆ ಬಂದಿದ್ದೆ. ವಿಜಯನಗರದಲ್ಲಿ ನನ್ನ ಪ್ರಾವಿಷನ್ ಸ್ಟೋರ್ ಇದೆ, ವ್ಯಾಪಾರಕ್ಕೆ ಅಂತ ತರಕಾರಿ ತಗೊಳ್ಳೋಕೆ ಬಂದಿದ್ದೆ. ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ಕಡಿಮೆ ಬೆಲೆಗೆ ಸಿಗುತ್ತೆ. ಅಂಗಡಿಯಲ್ಲಿ ವ್ಯಾಪಾರ ಮಾಡೋಕೆ ಅಂತ ಕಡಲೆಕಾಯಿ ಮೂಟೆ ಖರೀದಿಸಬೇಕಿತ್ತು. ಆದರೆ ಪೊಲೀಸರು ವಾಹನವನ್ನ ಸೀಜ್ ಮಾಡಿದ್ದಾರೆ. ತರಕಾರಿ ಚೀಲ ತೋರಿಸಿದರೂ ಸಹ ವಾಹನ ಬಿಡ್ತಿಲ್ಲ. ನಾನು ಏನೇ ಹೇಳಿದರು ಸಹ ಪೊಲೀಸರು ನನ್ನ ಮಾತು ನಂಬುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ಕರ್ಫ್ಯೂ
TRENDING ARTICLES