ಬಾಗೇಪಲ್ಲಿ ಆರ್ಟಿಓ ಚೆಕ್ ಪೋಸ್ಟ್; ಸಮಯ ರಾತ್ರಿ 3 ಗಂಟೆ
ಬಾಗೇಪಲ್ಲಿ ಟೋಲ್ ಬಳಿ ಇದ್ದ ಆರ್ಟಿಓ ಚೆಕ್ ಪೋಸ್ಟ್ನಲ್ಲಿಯೂ ಸಹ ಹಿಂದೆ ನೋಡಿದ ದೃಶ್ಯಗಳೇ ಕಂಡು ಬಂದ್ವು. ಇಲ್ಲಿಯೂ ನೂರಾರು ಲಾರಿಗಳು ನಿಂತಿದ್ದವು. ಚಾಲಕರು ಕೈಲಿ ಹಣ ಹಿಡಿದು ಸರದಿ ಸಾಲಿನಲ್ಲಿ ಲಂಚ ನೀಡುವುದಕ್ಕೆ ನಿಂತಿದ್ದರು.
ಇಲ್ಲಿಯೂ ಸಹ ನಾವು ಚಾಲಕರ ವೇಷದಲ್ಲಿ ಹೋಗಿ ನಮ್ಮದು ಗುಜ್ರಿ ತುಂಬಿದ ಲಾರಿ ಎಂದು ಹೇಳಿದಾಗ, ಚೆಕ್ಪೋಸ್ಟ್ ಸಿಬ್ಬಂದಿ ನಮ್ಮಿಂದ 500 ರೂ ಪಡೆದು ಹೊರಡಿ ಅಂತ ಸನ್ನೆ ಮಾಡಿದ್ರು. ಆಗ ನಮ್ಮ ತಂಡ ಕ್ಯಾಮೆರಾ ತೆಗೆದು ಚೀತ್ರೀಕರಣಕ್ಕೆ ಮುಂದಾಯ್ತು. ನಮ್ಮ ಕ್ಯಾಮೆರಾ ಕಂಡಿದ್ದೇ ತಡ ಅಲ್ಲಿನ ಸಿಬ್ಬಂದಿ ಅಲ್ಲಿದ್ದ ಕಂತೆ ಕಂತೆ ಹಣವನ್ನು ಎತ್ಕೊಂಡು ಕಚೇರಿಯ ಕರೆಂಟ್ ಆಫ್ ಮಾಡಿ ಶೂಟಿಂಗ್ ಮಾಡಲು ಅಡ್ಡಿ ಮಾಡಿದ್ರು.
ಇಷ್ಟಕ್ಕೇ ನಿಲ್ಲದ ಅಧಿಕಾರಿಗಳು ಬನ್ನಿ ಮಾತಾಡೋಣ ಎಂದು ಹೇಳಿ ದುಂಬಾಲು ಬಿದ್ರು. ಸಾಲದ್ದಕ್ಕೆ ತಾವು ಸಾಚಾ ಎನ್ನುವಂತ ಮಾತುಗಳನ್ನ ಆಡಿದ್ರು. ಅವರು ತೆರಿಗೆ ಸಂಗ್ರಹ ಮಾತ್ರ ಮಾಡ್ತಾ ಇರೋದಾಗಿ ಹೇಳಿದ್ರು.
ಸರ್ಕಾರ ಇವರಿಗೆ ತೆರಿಗೆ ಸಂಗ್ರಹ ಮಾಡಿ ರಾಜ್ಯಕ್ಕೆ ರಾಜಸ್ವ ಕ್ರೋಢಿಕರಣ ಮಾಡಿಲಿ ಎಂದು ಅಧಿಕಾರ ಕೊಟ್ಟರೆ ಇವರು ಮಾಡುವ ಕೆಲಸ ಇಂಥದ್ದು. ಆದರೆ ನಮ್ಮ ತಂಡ ಇಷ್ಟಕ್ಕೆ ಸುಮ್ಮನಿರಲಿಲ್ಲ. ನಮ್ಮ ಬೇಟೆ ಮುಂದುವರೆಸಿದೆವು. ನಾವು ಆಗಲೇ ಹೇಳಿದಂತೆ ನಮ್ಮ ತಂಡ ಮುಂದಿನ ಹುಡುಕಾಟಕ್ಕೆ ಮುಂದಾಗಿತ್ತು. ಅದಕ್ಕೂ ಮುನ್ನ ಸ್ವಲ್ಪ ವಿಶ್ರಾಂತಿ ಪಡೆದು ನಮ್ಮ ತಂಡ ಕೋಲಾರ ಜಿಲ್ಲೆಯ ನಂಗ್ಲಿ ಚೆಕ್ ಪೊಸ್ಟ್ ಕಡೆ ಹೆಜ್ಜೆ ಹಾಕಿತ್ತು.