ನವದೆಹಲಿ: ಭ್ರಷ್ಟಾಚಾರ ಎಲ್ಲೆಡೆಯೂ ಇರುವಂತೆ ಕೋರ್ಟ್ನಲ್ಲಿಯೂ ಇರುವುದು ಎಲ್ಲರಿಗೂ ಗೊತ್ತು. ಅದೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ಕಿರಿಕಿರಿಯನ್ನುಂಟು ಮಾಡಿದ ಘಟನೆ ನಡೆದಿದೆ. ಇಂಥ ಘಟನೆಯನ್ನು ನಿಂದಿಸಿರುವ ನ್ಯಾಯಾಧೀಶರು ಕೋರ್ಟ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಹಣ ನೀಡುವಂತೆ ಒತ್ತಾಯಿಸುವುದು, ಕಾನೂನುಬಾಹೀರವಾಗಿ ಪಡೆಯುವುದನ್ನು ಸಹಿಸಲು ಸಾಧ್ಯವಿಲ್ಲ.
ಆರೋಪಿಯೊಬ್ಬನನ್ನು ದೋಷಮುಕ್ತಗೊಳಿಸುವಂತೆ 50 ಸಾವಿರ ಡಿಮ್ಯಾಂಡ್ ಮಾಡಿದ ಕೋರ್ಟ್ ಸಿಬ್ಬಂದಿಯನ್ನು ಬಿಹಾರದ ನ್ಯಾಯಾಲಯದಲ್ಲಿ ವಜಾ ಮಾಡಲಾಗಿತ್ತು. ಈ ಪ್ರಕರಣ ಕುರಿತಾಗಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಕ್ಷಿದಾರರ ಪರ ವಕೀಲ ಇದು ನನ್ನ ಕಕ್ಷಿದಾರರ ಮೊದಲ ಆರೋಪ ಎಂದು ನ್ಯಾಯಾಲಯಕ್ಕೆ ಹೇಳಿದಾಗ, ನ್ಯಾಯಾಧೀಶರು ನಿಮ್ಮ ಕಕ್ಷಿದಾರರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದರು.