Saturday, November 23, 2024

ಕೋವಿಡ್​​ : ಬೆಂಗಳೂರಲ್ಲಿ 6,812 ಜನರಲ್ಲಿ ಕೊರೋನಾ ದೃಢ

ರಾಜ್ಯ : ಕರುನಾಡಿನಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಆತಂಕ ಹೆಚ್ಚಿಸುತ್ತಿದೆ. ರಾಜ್ಯದಲ್ಲಿ 8,449 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸಿಲಿಕಾನ್​ ಸಿಟಿಯಲ್ಲಿ 6ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಒಕ್ಕರಿಸಿದೆ.

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಮ್ಮಾರಿ ಕೊರೋನಾರ್ಭಟ ಹೆಚ್ಚಾಗುತ್ತಿದೆ. ಕರುನಾಡಿನ ಜಿಲ್ಲೆ ಜಿಲ್ಲೆಗೂ ಕೊರೊನಾ ಒಕ್ಕರಿಸುತ್ತಿದ್ದು ಆತಂಕ ಹೆಚ್ಚಿಸಿದೆ. ಹೊಸ ತಳಿ ಒಮೈಕ್ರಾನ್ ಕರುನಾಡಿಗೆ ಲಗ್ಗೆ ಇಟ್ಟು ತನ್ನ ಅಬ್ಬರ ಶುರುಮಾಡಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 107 ಒಮೈಕ್ರಾನ್ ಕೇಸ್ ಪತ್ತೆ ಆಗಿದ್ದು, ಆರೋಗ್ಯ ಇಲಾಖೆಗೆ ಟೆನ್ಷನ್ ಶುರುವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ. ಇನ್ನು 6ಕ್ಕೂ ಹೆಚ್ಚು ಮಂದಿಗೆ ಕೊರೋನಾ ವಕ್ಕರಿಸಿದೆ.

ಇನ್ನು ಸಿಲಿಕಾನ್ ಸಿಟಿ ಜನ್ರಿಗೆ ಕೊರೋನಾ ಜೊತೆಗೆ ಒಮೈಕ್ರಾನ್ ಸೋಂಕಿನ ಢವ ಢವ ಶುರುವಾಗಿದೆ. ಸಿಲಿಕಾನ್​ ಸಿಟಿಯಲ್ಲಿ ಸೋಂಕಿರ ಸಂಖ್ಯೆ ಏರಿಕೆಯಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆಯೂ ಡಬಲ್ ಆಗಿದೆ. ನೆನ್ನೆ ಒಂದೇ ನಗರದಲ್ಲಿ 4 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಪತ್ತೆಯಾಗಿದೆ. ಕೊರೋನಾ ಪತ್ತೆಯಾದ ಸೋಂಕಿತರಲ್ಲಿ ಅಪಾಯಕಾರಿ ರೋಗ ಲಕ್ಷಣಗಳಿದ್ದರೆ ಅಂತವರಿಗಾಗಿ ಆಸ್ಪತ್ರೆಗಳಲ್ಲಿ ಬೆಡ್​​ಗಳನ್ನ ಸಿದ್ದಪಡಿಸಿಕೊಳ್ಳಲಾಗಿದೆ.

ಇನ್ನು, ರಾಜ್ಯದಲ್ಲಿ ಕೊರೋನಾ ಓಟಕ್ಕೆ ಬ್ರೇಕ್​ ಹಾಕಲು ಸರ್ಕಾರ ವೀಕೆಂಡ್ ಕರ್ಪ್ಯು ಜಾರಿ ಮಾಡಿದೆ . ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಇರುವ ದಿನ ಗೂಲಿ ನೌಕರರು ಬೆಂಗಳೂರಿನ ಸಹವಾಸ ಸಾಕಪ್ಪಾ ಸಾಕು ಅಂತ ಮತ್ತೆ ಊರುಗಳತ್ತಾ ಮುಖ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಸಿಟಿಯಿಂದ ಜಿಲ್ಲೆ ಜಿಲ್ಲೆಗೂ ಒಮೈಕ್ರಾನ್ ವಕ್ಕರಿಸುತ್ತಿರೊ ಹಿನ್ನೆಲೆ ರಾಜ್ಯದ ಪಾಲಿಗೆ ಆತಂಕ ಹೆಚ್ಚಿಸಿದ್ದು, ಜನರ ನಿದ್ದೆ ಗೆಡಿಸಿದೆ. ಹೀಗಾಗಿ ಆರೋಗ್ಯ ಇಲಾಖೆ ಫುಲ್​ ಅಲರ್ಟ್ ಆಗಿ ಮೂರನೇ ಅಲೆಗೆ ಸಿದ್ಧತೆಯನ್ನು ಆರಂಭ ಮಾಡಿಕೊಂಡಿದೆ.

RELATED ARTICLES

Related Articles

TRENDING ARTICLES