Thursday, December 19, 2024

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಕೌಂಟ್ ಡೌನ್ ಶುರು

ಬೆಂಗಳೂರು : ರಾತ್ರಿ 8 ಗಂಟೆಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ , ವಾರದ ಕೊನೆಯ ಎರಡು ದಿನಗಳು ಸ್ಥಬ್ಧವಾಗಲಿದೆ. ಅಗತ್ಯ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು , ಅನಗತ್ಯ ಓಡಾಟಕ್ಕೆ ಬ್ರೇಕ್ ನೀಡಲಾಗಿದೆ.

ವೀಕೆಂಡ್ ಕರ್ಫ್ಯೂ ವೇಳೆ ಏನಿರಲ್ಲಾ..?

ರಾಜಧಾನಿಯಲ್ಲಿ BMTC ಓಡಾಟ ಇರಲ್ಲ, ಸಾರ್ವಜನಿಕ ಸೇವೆ ಇರುವುದಿಲ್ಲ,ಶೇ10 ರಷ್ಟು ಮಾತ್ರ ಬಸ್ ಗಳು ರಸ್ತೆಗೆ ಇಳಿಯಲಿದೆ. ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳು, ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಏರ್ಪೋರ್ಟ್ ಪ್ರಯಾಣದ ಬಸ್ ನಲ್ಲಿ ಯಾವುದೇ ತೊಡಕು ಇರುವುದಿಲ್ಲ. ಜನ ದಟ್ಟಣೆಗೆ ಅನುಸಾರವಾಗಿ KSRTC ಸೇವೆ ಇರಲಿದೆ.ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತರಾಜ್ಯ ಬಸ್ ಓಡಾಡಲಿದೆ, ಆದರೆ ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯದ ಪ್ರಯಾಣಿಕರಿಗೆ ಟಫ್ ರೂಲ್ಸ್ ಜಾರಿಯಾಗಲಿದೆ. RTPCR ನೆಗೆಟಿವ್ ವರದಿ ಇಲ್ಲದಿದ್ದರೆ ಬಸ್ ಗೆ ಪ್ರವೇಶ ಇರುವುದಿಲ್ಲ . ಕೋವಿಡ್ ರೂಲ್ಸ್ ಫಾಲೋ ಮಾಡಿ KSRTC ಬಸ್ ಸಂಚಾರ ನಡೆಸಲಿದೆ. ವೀಕೆಂಡ್ ನಲ್ಲಿ 20 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಿದೆ. ಕರ್ಫ್ಯೂ ವೇಳೆ ಮೆಟ್ರೋ ಎಂದಿನಂತೆ ಸಂಚಾರ ಇರಲಿದೆ , ದೆಹಲಿ ಮಾದರಿಯನ್ನೇ ಅನಸರಿಸಿ ನಮ್ಮ ಮೆಟ್ರೋ ಸೇವೆ ಒದಗಿಸಲಿದೆ, ಶನಿವಾರ ಹಾಗೂ ಭಾನುವಾರ 20 ನಿಮಿಷಗಳಿಗೊಮ್ಮೆ ಮೆಟ್ರೋ ಓಡಾಡಲಿದೆ. ವೀಕೆಂಡ್ ಕರ್ಫ್ಯೂ ವೇಳೆ ಬೆಳಗ್ಗೆ 8 ರಿಂದ ರಾತ್ರಿ 9 ರವರೆಗೆ ಕಾರ್ಯಾಚರಣೆ ನಡೆಯಲಿದೆ, ಉಳಿದಂತೆ ಎಲ್ಲಾ ದಿನವೂ ಬೆಳಗ್ಗೆ 5 ರಿಂದ 11 ರವರೆಗೆ ಮೆಟ್ರೋ ಸಂಚರಿಸಲಿದೆ.
ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್ ಅಗಲಿದೆ. ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ. ಪಾರ್ಸಲ್ ಗೂ ಅವಕಾಶ ಇಲ್ಲ. ಸಂಪೂರ್ಣ ಬಂದ್ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಬಂದ್ ಇರಲಿದೆ.

ಏನೆಲ್ಲಾ ಇರುತ್ತದೆ..?

ಹಾಲು, ಮೊಟ್ಟೆ, ಮಾಂಸ, ತರಕಾರಿ ಅಗತ್ಯ ಸೇವೆಗಳು ದೊರಕಲಿದೆ. ಹಾಲು, ಮೊಟ್ಟೆ, ಮಾಂಸ, ತರಕಾರಿ ಸಿಗುತ್ತದೆ. ದಿನ ಬಳಕಯೆ ಎಲ್ಲಾ ವಸ್ತುಗಳು ಸಿಗಲಿದೆ, ತರಕಾರಿ, ಸೊಪ್ಪು, ಹಣ್ಣು ಎಲ್ಲವೂ ಇರಲಿದೆ, ಚಿಕನ್, ಮಟನ್, ಮೊಟ್ಟೆ ಎಲ್ಲವೂ ದೊರಕಲಿದೆ.

RELATED ARTICLES

Related Articles

TRENDING ARTICLES