Friday, November 22, 2024

ಸಿಲಿಕಾನ್ ಸಿಟಿ ಜನರಿಗೆ ಕಾಡುತ್ತಿದೆ ಕೊರೋನಾ ಭಯ

ಬೆಂಗಳೂರು: ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಿಂದಾಗಿ ಜನರಿಗೆ ಭಯ ಕಾಡುತ್ತಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆಯೂ ಏರಿಕೆಯಾಗುತ್ತದೆ. ಕಳೆದ ವಾರಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

29-12-2021 ರಂದು 33 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರು, 6-1-2022 ರಂದು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ & ಒಮಿಕ್ರಾನ್ ಕೇಸ್ ಹೆಚ್ಚಳವಾಗಿದೆ. ಸಣ್ಣ ಸಣ್ಣ ಸಿಂಪ್ಟಮ್ಸ್ ಇದ್ದರು ಜನರು ಆಸ್ಪತ್ರೆಗೆ ಓಡುತ್ತಿದ್ದಾರೆ. ನೆಗಡಿ, ಕೆಮ್ಮು, ಜ್ವರ ಅಂತಾ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆಯಲ್ಲಿ 15-20 % ಏರಿಕೆಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 18,913 ಸಕ್ರಿಯ ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಜೊತೆ ಆಸ್ಪತ್ರೆಗೆ ದಾಖಲಾಗುವರ ಪ್ರಮಾಣ ಏರಿಕೆಯಾಗಿದೆ. ಪ್ರತಿನಿತ್ಯದ ಪಾಸಿಟಿವ್ ಕೇಸ್ ಗಳು ಡಬಲ್​ ಕಂಡುಬಂದಿದೆ. ಸೋಂಕಿತರ ಜೊತೆ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಡಬಲ್ ಆಗಿದೆ.ಸಿಲಿಕಾನ್ ಸಿಟಿಯ ಆಸ್ಪತ್ರೆಗೆ ದಾಖಲಾಗಿರೋರ ಸಂಖ್ಯೆ 124 ಕಂಡುಬಂದಿದೆ.

RELATED ARTICLES

Related Articles

TRENDING ARTICLES