ಬೆಂಗಳೂರು : ರಾಜ್ಯದಲ್ಲಿ ಕೋವಿಡ್- 19 ಒಮಿಕ್ರಾನ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 6:30 ಕ್ಕೆ ಸಿಎಂ ಬಸವರಾಜ್ ಮೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಜೊತೆ ಮಹತ್ವದ ಸಭೆ ನಡೆಯಲಿದೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿ ಶಿಫಾರಸು ಕೇಳಿದ್ದಾರೆ. ತಜ್ಞರ ಸಮಿತಿ ಪರಿಸ್ಧಿತಿ,ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಸಿಎಂ ವರದಿ ಈಗಾಗಲೇ ಒಪ್ಪಿಸಲಾಗಿದೆ. ಸಭೆಯಲ್ಲಿ ಲಾಕ್ಡೌನ್ ಭವಿಷ್ಯ ವಿರ್ಧಾರವಾಗುತ್ತಿರುವ ಸಾಧ್ಯತೆಗಳಿವೆ ಎನ್ನಲಾಗುತ್ತದೆ. ಇಂದು ಇನ್ನೊಮ್ಮೆ ತಜ್ಞರ ಅಭಿಪ್ರಾಯ ಪಡೆದ ನಂತರ ಗುರುವಾರ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ.
ಸಾರ್ವಜನಿಕ ಸಾರಿಗೆ 50% ಕಾರ್ಯಾಚರಣೆ ಅವಕಾಶ, ಬಸ್,ಮೆಟ್ರೋದಲ್ಲಿ 50% ಸೀಟು ತುಂಬಲು ಮಾತ್ರ ಅವಕಾಶ, ಕಾರ್ಖಾನೆಗಳು , ಐಟಿ-ಬಿಟಿ ಕಂಪನಿಗಳಿಗೆ 50% ಕಾರ್ಯಾಚರಣೆ ಅಥವಾ ವರ್ಕ್ ಫ್ರಮ್ ಹೋಂಗೆ ಸೂಚಿಸಲಾಗಿದೆ. ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗ ಸೂಚಿ ಜಾರಿಗೊಳಿಸುವ ಸಾಧ್ಯತೆ ಇದೆ. ಹಾಗೆನೇ ಸಿಲಿಕಾನ್ ಸಿಟಿ ಸೆಮಿ ಲಾಕ್ಡೌನ್ ಮಾಡುವ ಸಾಧ್ಯತೆ ಇದೆ.