ಬೆಂಗಳೂರು : ದಿನದಿಂದ ದಿನಕ್ಕೆ ಕೊರೋನಾ ಕೇಸ್ಗಳು ಜಾಸ್ತಿಯಾಗುತ್ತಲಾ ಇದೆ, ಈ ಕಾರಣದಿಂದಾಗಿ ರಾಜಧಾನಿಯು ಲಾಕ್ಡೌನ್ ಆಗುತ್ತದೆಯೋ ಅಥವಾ ಇಲ್ಲವೋ ಎಂಬ ಶಂಕೆ ಜನರಲ್ಲಿ ಮೂಡುತ್ತಿದೆ.
ಸೋಂಕು ಕಂಟ್ರೋಲ್ಗೆ ಲಾಕ್ಡೌನ್ ಬ್ರಹ್ಮಾಸ್ತ್ರ ಪ್ರಯೋಗವಾಗುತ್ತದೆಯೋ , ವೀಕೆಂಡ್ ಲಾಕ್ಡೌನ್ಗೆ ರಾಜ್ಯ ಸರ್ಕಾರ ಸಿದ್ಧತೆಯನ್ನು ನಡೆಸುತ್ತಿದೆ. ವೀಕೆಂಡ್ನಲ್ಲಿ ಏನೆಲ್ಲಾ ಇರುತ್ತೆ..? ಏನೆಲ್ಲಾ ಬಂದ್ ಆಗುತ್ತೆ..? ಅಗತ್ಯ ಸೇವೆಗಳು ಹೊರತುಪಡಿಸಿ ಎಲ್ಲವೂ ಬಂದ್ ಆಗುತ್ತಾ..? ಬೆಳಗ್ಗೆ 6ರಿಂದ ಮಧ್ಯಾಹ್ನ 2ವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಸಿಗುತ್ತಾ.? ಎಂಬ ಪ್ರಶ್ನೆಯು ಜನರನ್ನು ಕಾಡುತ್ತಿದೆ.
ಮೆಟ್ರೋ, ಬಸ್ ಸಂಚಾರಕ್ಕೆ ವೀಕೆಂಡ್ನಲ್ಲಿ ಬ್ರೇಕ್ ಬೀಳುತ್ತಾ ..? ಥಿಯೇಟರ್, ಜಿಮ್, ಈಜುಕೊಳಕ್ಕೆ ವೀಕೆಂಡ್ನಲ್ಲಿ ಬೀಗ ಬೀಳುತ್ತಾ..? ವೀಕೆಂಡ್ನಲ್ಲಿ ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಸಿಗುತ್ತಾ..? ವೀಕೆಂಡ್ನಲ್ಲಿ ಶಾಲಾ ಕಾಲೇಜುಗಳು, ತರಬೇತಿ ಕೇಂದ್ರಗಳಿಗೆ ಬೀಗ ಪಕ್ಕಾನಾ.? ಇಂದು ಸಂಜೆ ತಜ್ಞರ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ.