Friday, November 22, 2024

ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್‌ ನಲ್ಲಿ ಮಧ್ಯ ಪ್ರವೇಶಿಸದ ಸುಪ್ರೀಂಕೋರ್ಟ್

ನವದೆಹಲಿ : ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್​ನಲ್ಲಿ ಈ ಹಿಂದೆ ಮನರಂಜನಾ ಸ್ಥಳವಿದ್ದ ಜಾಗದಲ್ಲಿ ಇದೀಗ ಉಪರಾಷ್ಟ್ರಪತಿಯವರ ಅಧಿಕೃತ ನಿವಾಸ ನಿರ್ಮಿಸುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇದು ನೀತಿಯ ವಿಷಯವಾಗಿದೆ, ದುರುಪಯೋಗದ ಹೊರತು ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹಿಂದೆ ಮನರಂಜನಾ ಪ್ರದೇಶವಾಗಿದ್ದರಿಂದ ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕಿತ್ತು ಎಂಬುದು ಅರ್ಜಿದಾರರ ವಾದ. ಆದರೆ ಇದು ನ್ಯಾಯಾಂಗ ಪರಾಮರ್ಶೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನ್ಯಾಯಮೂರ್ತಿ ಎ ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ಇದು ಸಂಬಂಧಪಟ್ಟ ಪ್ರಾಧಿಕಾರದ ವಿಶೇಷತೆ ಮತ್ತು ಇದು ನೀತಿಯ ವಿಷಯ ಎಂದು ಹೇಳಿದೆ.

ಸಂತೋಷ್ ಹೊಸಹಳ್ಳಿ, ನವದೆಹಲಿ.

RELATED ARTICLES

Related Articles

TRENDING ARTICLES