ಬೆಂಗಳೂರು: ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾದ ನಂತರ ಮೂರನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯ ಬಜೆಟ್ ಮಂಡನೆಯು ವಿಶೇಷವಾಗಿದೆ ಎಂದು ಹೇಳಬಹುದು. ‘ಮೇಡ್ ಇನ್ ಇಂಡಿಯಾ’ ಟ್ಯಾಬ್ ನಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಮೋ ಸರ್ಕಾರದ 9 ನೇ ಬಜೆಟ್ ಮಂಡನೆ ಇದಾಗಿದೆ. ಕೊರೋನಾ ಸಂಕಷ್ಟದ ನಡುವೆಯು ಬಜೆಟ್ ಮಂಡನೆ. ಬಜೆಟ್ ಮಂಡನೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ವಿರೋಧದ ನಡುವೆಯು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
2021ರ ಬಜೆಟ್ನಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನ
- ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಅನುದಾನ
- ಕೃಷಿ ಇಲಾಖೆ ಮೂಲ ಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರದಿಂದ ಕ್ರಮ
- ದೇಶದಲ್ಲಿ ಸಾಂಕ್ರಾಮಿಕ ರೋಗ ತಡೆಯಲು ಸರ್ವ ಪ್ರಯತ್ನ
- ಆತ್ಮ ನಿರ್ಭರ್ ಯೋಜನೆಗೆ 64,180 ಸಾವಿರ ಕೋಟಿ ಮೀಸಲು
- 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
- ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು
- 86 ಕೋಟಿ ಮನೆಗಳಿಗೆ ಕುಡಿಯುವ ನೀರು ಸಂಪರ್ಕ
- ದೇಶದಲ್ಲಿ 17 ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ
- ದೇಶದ ಹಲವೆಡೆ ತುರ್ತು ಆರೋಗ್ಯ ಕೇಂದ್ರಗಳ ಸ್ಥಾಪನೆ
- ಕೋವಿಡ್ ಲಸಿಕೆಗಾಗಿ 35 ಸಾವಿರ ಕೋಟಿ ವಿನಿಯೋಗ
- 500 ನಗರಗಳು ಅಮೃತ ನಗರಗಳು ಎಂದು ಘೋಷಣೆ
- ದೇಶದಲ್ಲಿ 3 ವರ್ಷದಲ್ಲಿ 7 ಜವಳಿ ಪಾರ್ಕ್ಗಳ ನಿರ್ಮಾಣ
- 2 ವರ್ಷದಲ್ಲಿ 2 ಜವಳಿ ಪಾರ್ಕ್ಗಳ ನಿರ್ಮಾಣ ಗುರಿ
- 15 ವರ್ಷ ಹಳೆಯದಾದ ವಾಹನಗಳು ಸ್ಕ್ರ್ಯಾಪ್ಗೆ
- ಮೊದಲು ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕುವ ಯೋಜನೆ
- ಹೆದ್ದಾರಿಗಳ ಮೂಲ ಸೌಕರ್ಯ ಒದಗಿಸಲು ಖಾಸಗಿ ಭಾಗಿತ್ವ
- ಹೆದ್ದಾರಿಗಳ ಮೂಲಸೌಕರ್ಯಕ್ಕೆ ಖಾಸಗಿ ಬಂಡವಾಳ ಆಕರ್ಷಣೆ
- ಭಾರತ್ ಮಾಲಾ ಯೋಜನೆಯಲ್ಲಿ 2800 ಕಿಲೋಮೀಟರ್ ಅಭಿವೃದ್ಧಿ
- ಈ ವರ್ಷ ಭಾರತ ಮಾಲಾ ಯೋಜನೆಯಡಿ 500 ಕಿ.ಮೀ. ಅಭಿವೃದ್ಧಿ
- ಚುನಾವಣೆ ನಡೆಯುವ ಕೇರಳ, ತಮಿಳುನಾಡು, ಪಶ್ಚಿಮಬಂಗಾಳ ಅಸ್ಸಾಂ, ಪುದುಚೇರಿ ರಾಜ್ಯಗಳಿಗೆ ಬಂಪರ್ ಕೊಡುಗೆ
- ಚುನಾವಣೆ ದೃಷ್ಟಿಯಿಂದ ಹಲವು ಯೋಜನೆಗಳ ಘೋಷಣೆ
- ಮಧುರೈ ಮತ್ತು ಕೇರಳ ಸಂಪರ್ಕಿಸುವ ಹೆದ್ದಾರಿ ಅಭಿವೃದ್ಧಿ
- ಮುಂಬೈ- ಕನ್ಯಾಕುಮಾರಿ ಕಾರಿಡಾರ್
- ಕೊಲ್ಕೊತ್ತಾ – ಸಿಲುಗಿರಿ ಹೆದ್ದಾರಿ ಯೋಜನೆಗೆ ಗ್ರೀನ್ ಸಿಗ್ನಲ್
- 30 ಸಾವಿರ ಕೋಟಿ ವೆಚ್ಚದಲ್ಲಿ ದೇಶದಲ್ಲಿ ಹೆದ್ದಾರಿಗಳ ಅಭಿವೃದ್ಧಿ
- ಅಸ್ಸಾಂಗೆ 19 ಸಾವಿರ ಕೋಟಿ ರೂ ಅಭಿವೃದ್ಧಿ ಪ್ಯಾಕೇಜ್
- ರೈಲ್ವೆಯಲ್ಲಿ ಮಿಷನ್ 2030 ಯೋಜನೆ ಘೋಷಣೆ
- 18. 615 ಕೋಟಿ ಹೆದ್ದಾರಿಗಳ ಅಭಿವೃದ್ಧಿಗೆ ಮೀಸಲು
- ಕೇರಳದಲ್ಲಿ 65 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ
- ರೈಲ್ವೆ ಸಾರಿಗೆಯಲ್ಲಿ ಪ್ರಯಾಣಿಕರ ಸೇಫ್ಟಿಗೆ ಹೆಚ್ಚು ಒತ್ತು
- ರೈಲ್ವೆ ಇಲಾಖೆ ಆಧುನಿಕರಣಕ್ಕೆ ಕೇಂದ್ರ ಸರ್ಕಾರ ಪ್ಲಾನ್
- ಅಸ್ಸಾಂನಲ್ಲಿ 34 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ
- ನಗರಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ
- ಶೇ.100 ರಷ್ಟು ವಿದ್ಯುದೀಕರಣಕ್ಕೆ ಸರ್ಕಾರ ಪ್ಲಾನ್
- 10.055 ಕೋಟಿ ರೂಪಾಯಿ ರೈಲ್ವೆ ಇಲಾಖೆಗೆ ಮೀಸಲು
- ಕೊಚ್ಚಿ ಮೇಟ್ರೋ ಫೇಸ್-2 ಯೋಜನೆ ಮುಂದುವರಿದ ಭಾಗ್ಕಕೆ ಅನುದಾನ
- ಬೆಂಗಳೂರು ಮೆಟ್ರೋ ಫೇಸ್-2 ಮತ್ತು ಫೇಸ್ 3ಗೆ ಅನುದಾನ
- ಬೆಂಗಳೂರು ಮೆಟ್ರೋ ವಿಸ್ತರಣೆಗೆ 14,780 ಕೋಟಿ ರೂಪಾಯಿ
- ಬೆಂಗಳೂರು ಮೆಟ್ರೋ ಮತ್ತೆರಡು ಮಾರ್ಗಗಳ ಘೋಷಣೆ
- ನಮ್ಮ ಮೆಟ್ರೋ 58.19 ಕಿಲೋ ಮೀಟರ್ ವಿಸ್ತರಣೆಗೆ ಪ್ಲಾನ್
- ಬಂದರುಗಳ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ
- 2 ಸಾವಿರ ವೆಚ್ಚದಲ್ಲಿ 7 ಯೋಜನೆಗಳ ಜಾರಿ
- ಬಂದರುಗಳ ಅಭಿವೃದ್ಧಿಯಲ್ಲಿ ಖಾಸಗಿಗೆ ಅವಕಾಶ
- ಬಂದರುಗಳ ಅಭಿವೃದ್ಧಿಗೆ 1.600 ಕೋಟಿ ರೂ ಮೀಸಲು
- ಬಜೆಟ್ನಲ್ಲಿ 5 ಶಿಪ್ಪಿಂಗ್ಯಾರ್ಡ್ಗಳ ಘೋಷಣೆ
- ಶುದ್ಧ ವಿದ್ಯುತ್ ಉತ್ಪಾದನೆಗೆ ಕೇಂದ್ರದಿಂದ ಕ್ರಮ
- ನವೀಕರಿಸಬಹುದಾದ ವಿದ್ಯುತ್ಗೆ ಹೆಚ್ಚು ಆದ್ಯತೆ
- ಉಜ್ವಲ ಯೋಜನೆ ವಿಸ್ತರಣೆ 8 ಕೋಟಿಯಿಂದ ಮತ್ತಷ್ಟು ಹೆಚ್ಚಳ
- 100 ಜಿಲ್ಲೆಗಳಿಗೆ ಉಜ್ವಲ ಯೋಜನೆ ವಿಸ್ತರಣೆ
- 8 ಕೋಟಿಯಿಂದ 9 ಕೋಟಿಗೆ ಉಜ್ವಲ ಯೋಜನೆ ವಿಸ್ತರಣೆ
- 9 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆ ವಿಸ್ತರಣೆ
- ಗ್ಯಾಸ್ ಪೈಪ್ಲೈನ್ ಯೋಜನೆ ವಿಸ್ತರಿಸಿದ ನಿರ್ಮಲಾ ಸೀತಾರಾಮ್
- ಜಮ್ಮು-ಕಾಶ್ಮೀರಕ್ಕೆ ಗ್ಯಾಸ್ಪೈಪ್ ಲೈನ್ ಯೋಜನೆ ವಿಸ್ತರಣೆ
- ಅಂತರಾಷ್ಟ್ರೀಯ ಮಟ್ಟದ ಫಿನ್ಟೆಕ್ ಹಬ್ ಘೋಷಣೆ
- ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕಾನೂನುಗಳ ಬದಲಾವಣೆ
- 1 ಸಾವಿರ ಹೊಸ ಗ್ಯಾಸ್ ಏಜೆನ್ಸಿಗಳ ಸ್ಥಾಪನೆಗೆ ನಿರ್ಧಾರ
- ವಿಮೆ ಕ್ಷೇತ್ರದಲ್ಲಿ ಎಫ್ಡಿಐ ಮಿತಿ ಹೆಚ್ಚಳಕ್ಕೆ ತೀರ್ಮಾನ
- ಖಾಸಗಿ ಹೂಡಿಕೆ ಶೇ.49ರಿಂದ ಶೇ. 74ಕ್ಕೆ ಏರಿಕೆ
- ಬ್ಯಾಂಕುಗಳಿಗೆ ಮತ್ತಷ್ಟು ಸರ್ಕಾರಿ ಹಣದ ಹರಿವು
- ಬ್ಯಾಂಕ್ಗಳಿಲ್ಲಿನ ಡೆಪಾಸಿಟ್ ರಕ್ಷಣೆಗೆ ಕ್ರಮ
- 5 ಲಕ್ಷದವರೆಗೆ ಬ್ಯಾಂಕ್ಗಳಲ್ಲಿನ ಠೇವಣಿಗೆ ಭದ್ರತೆ
- 1 ಲಕ್ಷ ಇದ್ದ ಠೇವಣಿ ಭದ್ರತೆಯನ್ನ 5 ಲಕ್ಷಕ್ಕೆ ಏರಿಕೆ
- ನಷ್ಟದಲ್ಲಿರುವ ಬ್ಯಾಂಕುಗಳ ಗ್ರಾಹಕರಿಗೆ ಅನುಕೂಲ
- ಬ್ಯಾಂಕ್ಗಳಿಗೆ 2 ಸಾವಿರ ಕೋಟಿ ರೂಪಾಯಿ ಅನುದಾನ
- ಬ್ಯಾಂಕಿಂಗ್ ಸಿಸ್ಟಂ ಉನ್ನತಿಕರಣಕ್ಕೆ ಸರ್ಕಾರ ನಿರ್ಧಾರ
- ಸಣ್ಣ ಕಂಪನಿಗಳ ವ್ಯವಹಾರದ ಮಿತಿಯಲ್ಲಿ ಹೆಚ್ಚಳ
- 50 ಲಕ್ಷದಿಂದ 2 ಕೋಟಿಗೆ ಏರಿಕೆ ಮಾಡಿದ ಕೇಂದ್ರ
- ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ
- ಎಲ್ಐಸಿಯಲ್ಲಿ ಬಂಡವಾಳ ಹಿಂತೆಗೆತ ಘೋಷಣೆ
- 2 ಸರ್ಕಾರಿ ಬ್ಯಾಂಕುಗಳಲ್ಲಿ ಬಂಡವಾಳ ಹಿಂತೆಗೆತ
- ಏರ್ ಇಂಡಿಯಾದಲ್ಲಿ ಬಂಡವಾಳ ಸಂಪೂರ್ಣ ಹಿಂತೆಗೆತ
- ಏರ್ ಇಂಡಿಯಾ ಖಾಸಗಿಯವರಿಗೆ ಮಾರಾಟ
- ಬಿಇಎಂಎಲ್, ಐಡಿಬಿಐ ಬ್ಯಾಂಕ್ನಲ್ಲಿ ಬಂಡವಾಳ ಹಿಂತೆಗೆತ
- ಕೃಷಿ ತಿದ್ದುಪಡಿ ಕಾಯ್ದೆಯನ್ನ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
- ರೈತರ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿದೆ ಎಂದು ಸಮರ್ಥನೆ
- ರೈತರ ಬೆಲೆಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಸಿದ್ಧ
- ರೈತರ ಅಕೌಂಟ್ಗೆ ನೇರವಾಗಿ ಹಣ ಸಂದಾಯಕ್ಕೆ ಬದ್ಧ
- ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ನೀಡಲು ಒಪ್ಪಿಗೆ
- ಉದ್ಯಮ ಸರಳೀಕರಣಕ್ಕೆ ಕೇಂದ್ರದಿಂದ ಕ್ರಮ
- ಎಂಎಸ್ಪಿ ಅಡಿಯಲ್ಲೇ ರೈತರಿಂದ ಉತ್ಪನ್ನ ಖರೀದಿ
- ಗೋಧಿ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ ಎಂದ ನಿರ್ಮಲಾ ಸೀತಾರಾಮ್
- ಗೋಧಿಗಾಗಿ 33 ಸಾವಿರ ಕೋಟಿ ಬೆಂಬಲ ಬೆಲೆ ಕೊಟ್ಟಿದ್ದೇವೆ
- 42 ಲಕ್ಷ ಜನ ಗೋಧಿ ಬೆಳೆಯುವ ರೈತರಿಗೆ ಇದ್ರಿಂದ ಅನುಕೂಲ ಆಗಿದೆ.
- ಅಕ್ಕಿಗೂ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ- ನಿರ್ಮಲಾ ಸೀತಾರಾಮ್
- ಅಕ್ಕಿಗೆ 1.40 ಸಾವಿರ ಕೋಟಿ ರೂಪಾಯಿ ಬೆಂಬಲ ಬೆಲೆ
- ಬೇಳೆಕಾಳುಗಳ ಖರೀದಿಗೆ 10,500 ಕೋಟಿ ಮೀಸಲು
- ಆಹಾರ ಧಾನ್ಯಗಳ ಖರೀದಿಗೆ 1.41, 400 ಕೋಟಿ ವೆಚ್ಚ
- ಕೃಷಿ ಇಲಾಖೆ ಸಾಲ ಗುರಿ- 6.7 ಲಕ್ಷ ರೂಪಾಯಿ
- 22 ಬೆಳೆಗೆ ಬೆಳೆ ವಿಮೆ ಯೋಜನೆ ವಿಸ್ತರಣೆ
- ಎಪಿಎಂಸಿಗಳ ಆಧುನಿಕರಣಕ್ಕೆ ಸರ್ಕಾರ ನಿರ್ಧಾರ
- ರೈತರಿಗೆ ಸಾಲ ನೀಡಲು 16.5 ಕೋಟಿ ಅನುದಾನ
- ಎಪಿಎಂಸಿಯಲ್ಲಿ ಜಿಡಿಟಲ್ ಬ್ಯಾಂಕಿಂಗ್ ಸಿಸ್ಟಂ
- ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಗೆ 40 ಸಾವಿರ ಕೋಟಿ ರೂಪಾಯಿ ಮೀಸಲು
- 5 ಮೀನುಗಾರಿಗೆ ಬಂದರುಗಳ ಅಭಿವೃದ್ಧಿ
- ತಮಿಳುನಾಡಿನಲ್ಲಿ ವಿಶೇಷ ಮೀನುಗಾರಿಕೆ ಯೋಜನೆ
- ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ ಜಾರಿ ಇದ್ರಿಂದ ದೇಶದ ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿದೆ.69 ಕೋಟಿ ಜನರಿಗೆ ಈ ಯೋಜನೆಯಿಂದ ಲಾಭ.
- ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಮಾನ ವೇತನ ಕಾಯ್ದೆ ಜಾರಿ
- ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
- ದೇಶದಲ್ಲಿ 100 ಸೈನಿಕ ಶಾಲೆಗಳ ಸ್ಥಾಪನೆ
- ದೇಶದಲ್ಲಿ 15 ಸಾವಿರ ಹೊಸ ಶಾಲೆಗಳ ಸ್ಥಾಪನೆ
- ಬುಡಕಟ್ಟು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕ್ರಮ
- ಬುಡಕಟ್ಟು ಪ್ರದೇಶಗಳಲ್ಲಿ ಮತ್ತಷ್ಟು ಶಾಲೆಗಳು ಆರಂಭ
- ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ
- ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಪ್ರೋತ್ಸಾಹ
- ಲೇಹ್ನಲ್ಲಿ ಸದ್ಯದಲ್ಲೇ ಸೆಂಟ್ರಲ್ ವಿಶ್ವವಿದ್ಯಾಲಯ ಸ್ಥಾಪನೆ
- ಗಿರಿಜನ ಪ್ರದೇಶಗಳಲ್ಲಿ ಏಕಲವ್ಯ ಶಾಲೆಗಳ ನಿರ್ಮಾಣ
- 750 ಏಕಲವ್ಯ ಶಾಲೆಗಳ ನಿರ್ಮಾಣಕ್ಕೆ ನಿರ್ಧಾರ
- ರಾಷ್ಟ್ರೀಯ ಭಾಷಾ ಅನುದಾನ ಮಿಷನ್ ಘೋಷಣೆ
- ಡಿಸೆಂಬರ್ನಲ್ಲಿ ಭಾರತದ ಮಾನವರಹಿತ ಗಗನಯಾನ
- ಬಾಹ್ಯಾಕಾಶಕ್ಕೆ ಮಾನವರಹಿತ ಗನನಯಾನ
- ರಷ್ಯಾದಲ್ಲಿ ಭಾರತದ 4 ಗಗನಯಾತ್ರಿಗಳಿಗೆ ತರಬೇತಿ
- ಮೊಟ್ಟ ಮೊದಲು ಜಿಡಿಟಲ್ ಜನಗಣತಿಗೆ ಯೋಜನೆ
- 3768 ಕೋಟಿ ರೂ ವೆಚ್ಚದಲ್ಲಿ ಜನಗಣತಿ
- ಅಸ್ಸಾಂ, ಪಶ್ಚಿಮಬಂಗಾಳ ಟೀ ಕಾರ್ಮಿಕರಿಗಾಗಿ 300 ಕೋಟಿ ರೂ ಯೋಜನೆ
- ಪೋರ್ಚುಗೀಸರ ವಿಮೋಚನೆ ದಿನ ಆಚರಣೆಗೆ 300 ಕೋಟಿ
- ಗೋವಾ ಸರ್ಕಾರಕ್ಕೆ 300 ಕೋಟಿ ಅನುದಾನ ನಿಗದಿ
- ಮುಂದಿನ 3 ತಿಂಗಳಲ್ಲಿ ಮಾರುಕಟ್ಟೆಗಳಿಂದ 80 ಸಾವಿರ ಕೋಟಿ ಸಂಗ್ರಹ
- 2021-22ರೊಳಗೆ ವಿತ್ತೀಯ ಕೊರತೆ ಜಿಡಿಪಿಯ 6.8ರಷ್ಟು ನಿರೀಕ್ಷೆ
- ಆಹಾರ ನಿಗಮಕ್ಕೆ ನೀಡಲಾಗುತ್ತಿದ್ದ ಸಾಲ ರದ್ದು
- ರಾಷ್ಟ್ರೀಯ ಭದ್ರತಾ ಸಾಮಾಜಿಕ ನಿಧಿಯಿಂದ ನೀಡುತ್ತಿದ್ದ ಸಾಲ ರದ್ದು
- ಸರ್ಕಾರದ ಆದಾಯಕ್ಕೆ ಕೊರೋನಾದಿಂದ ಹೊಡೆತ ಬಿದ್ದಿದೆ
- ನೇರ ತೆರಿಗೆಯಲ್ಲಿ ಬದಲಾವಣೆ
- ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್. 75 ವರ್ಷ ಮೇಲ್ಪಟ್ಟ ವೃದ್ಧರಿಗೆ ರಿಲೀಫ್. ಪಿಂಚಣಿದಾರರಿಗೂ ಗುಡ್ ನ್ಯೂಸ್ ಕೊಟ್ಟ ಕೇಂದ್ರ.75 ವರ್ಷಕ್ಕೂ ಮೇಲ್ಪಟ್ಟ ಪಿಂಚಣಿದಾರರಿಗೆ ತೆರಿಗೆ ಇಲ್ಲ. ಪೆನ್ಷನ್ ಮತ್ತು ಠೇವಣಿ ಮೇಲೆ ಬಡ್ಡಿಗೆ ಟ್ಯಾಕ್ಸ್ ಇಲ್ಲ
- 15 ಲಕ್ಷಕ್ಕೂ ಹೆಚ್ಚು ತೆರಿಗೆ ವಂಚನೆ ಆದ್ರೆ ಮಾತ್ರ ಕೇಸ್
- ಅನಿವಾಸಿ ಭಾರತೀಯರಿಗೆ ಏಕ ತೆರಿಗೆ ಪದ್ಧತಿ ಜಾರಿ
- ತೆರಿಗೆ ಪ್ರಕರಣಗಳ ಮರುತನಿಖೆ ಅವಧಿ 3 ವರ್ಷಕ್ಕೆ ಇಳಿಕೆ
- ರಿಯಲ್ ಎಸ್ಟೇಟ್ಗೆ ಬಿಗ್ ರಿಲೀಫ್ ಕೊಟ್ಟ ಕೇಂದ್ರ
- ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವವರಿಗೆ ತೆರಿಗೆ ವಿನಾಯ್ತಿ
- ಚಾರಿಟೇಬಲ್ ಟ್ರಸ್ಟ್ಗೆ ತೆರಿಗೆ ವಿನಾಯ್ತಿ
- ಸ್ಟಾರ್ಟಪ್ಗಳಿಗೆ ತೆರಿಗೆ ರಜೆ ಘೋಷಣೆ
- ಇನ್ನೊಂದು ವರ್ಷ ತೆರಿಗೆ ಘೋಷಿಸಿದ ಕೇಂದ್ರ ಸರ್ಕಾರ
- ಜಿಎಸ್ಟಿ ತೆರಿಗೆ ಸರಳಿಕರಣಕ್ಕೆ ಕೇಂದ್ರ ಸರ್ಕಾರ ಕ್ರಮ
- ಕಂಪನಿಗಳು ತಡವಾಗಿ ಪಿಎಫ್ ಕಟ್ಟುವಂತಿಲ್ಲ
- ಅಬಕಾರಿ ಸುಂಕದಲ್ಲಿ ಭಾರೀ ಬದಲಾವಣೆ
- 400 ತೆರಿಗೆ ವಿನಾಯ್ತಿಗಳ ಬಗ್ಗೆ ಪರಿಶೀಲನೆ
- ಎಲೆಕ್ಟ್ರಾನಿಕ್ಸ್ ವಸ್ತುಗಳ ಅಬಕಾರಿ ಸುಂಕ ಹೆಚ್ಚಳ
- ಶೇ.2.5ರಷ್ಟು ಅಬಕಾರಿ ಸುಂಕ ಹೆಚ್ಚಿಸಿದ ಕೇಂದ್ರ
- ಮೊಬೈಲ್ ಬಿಡಿಭಾಗಗಳ ಆಮದು ಸುಂಕ ಕಡಿತ
- ಜವಳಿ, ಉಕ್ಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ
- ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ದುಬಾರಿ
- ಚಿನ್ನದ ಮೇಲೆ ಆಮದು ಸುಂಕ ಹೆಚ್ಚಳ ಇಲ್ಲ
- ಚಿನ್ನದ ಮೇಲೆ ಶೇ. 12.5ರಷ್ಟು ತೆರಿಗೆ ಮುಂದುವರಿಕೆ
- ಆಟೋ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ
- ಬಣ್ಣಗಳ ಬೆಲೆ ಕಡಿಮೆ ಆಗಲಿದೆ
- ರೇಷ್ಮೆ, ಸೋಲಾರ್, ಇನ್ವರ್ಟರ್ಗಳ ಬೆಲೆ ಏರಿಕೆ