Friday, November 22, 2024

IPL 2020 ಶೀರ್ಷಿಕೆ ಪ್ರಾಯೋಜಕತ್ವ ಮಾತ್ರ Dream 11  ತೆಕ್ಕೆಗೆ ..!

IPL ಶೀರ್ಷಿಕೆ ಪ್ರಾಯೋಜಕತ್ವ Dream 11 ಪಾಲಾಗಿದೆ.  ಚೀನಾ ಮೂಲದ VIVO ಪ್ರಾಯೋಜಕತ್ವದ ವಿರುದ್ಧ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದರಿಂದ ಬಿಸಿಸಿಐ ಆ ಸಂಸ್ಥೆಯ ಪ್ರಾಯೋಜಕತ್ವವನ್ನು ರದ್ದು ಮಾಡಿತ್ತು.

ಐಪಿಎಲ್ 2020ಗೆ 45 ದಿನಗಳು ಬಾಕಿ ಇರುವಾಗ VIVO ಪ್ರಾಯೋಜಕತ್ವ ಕಳೆದುಕೊಂಡಿದ್ದರಿಂದ ಬಿಡ್​​ ಕರೆಯಲಾಗಿತ್ತು. ಪತಂಜಲಿ, ಟಾಟಾ ಸನ್ಸ್, ಬೈಜುಸ್, ಅನಕಾಡೆಮಿ ಸೇರಿದಂತೆ ಹತ್ತಾರು ಪ್ರತಿಷ್ಠಿತ ಕಂಪನಿಗಳು ಐಪಿಎಲ್ ಶೀರ್ಷಿಕೆ  ಪ್ರಾಯೋಜಕತ್ವಕ್ಕೆ ಪೈಪೋಟಿಗಿಳಿದಿದ್ದವು. ಎಲ್ಲಾ ಕಂಪನಿಗಳನ್ನು ಬಿಡ್​ನಲ್ಲಿ ಹಿಂದಿಕ್ಕಿ ಡ್ರೀಮ್ 11 ಪ್ರಾಯೋಜಕತ್ವ ಪಡೆದಿದೆ. ಬರೋಬ್ಬರಿ 222 ಕೋಟಿ ರೂಗಳಿಗೆ ಡ್ರೀಮ್ 11 ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ.

ಇದು ಐಪಿಎಲ್ 2020ಗೆ ಮಾತ್ರ ಸೀಮಿತವಾಗಿದ್ದು, 2021 -2022ಕ್ಕೆ ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವವನ್ನು ನಿರಾಕರಿಸಿದೆ.

 

RELATED ARTICLES

Related Articles

TRENDING ARTICLES