Saturday, December 28, 2024

ವಾಯುಭಾರ ಕುಸಿತ : ಮುಂದಿನ ಐದು ದಿನ ಸಿಲಿಕಾನ್​ ಸಿಟಿಗೆ ಮಳೆ ಸಾಧ್ಯತೆ !

ಬೆಂಗಳೂರು : ಮುಂದಿನ ಐದು ದಿನಗಳ ಕಾಲ ಬೆಂಗಳೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಮಾನ ಇಲಾಖೆ ಎಚ್ಚರಿಕೆ ನೀಡಿದ್ದು. ರಾಜ್ಯದ ದಕ್ಷಿಣ ಒಳಭಾಗದಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ದೊರತಿದೆ.

ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಬೆಂಗಳೂರಲ್ಲಿ ಬೆಳಿಗ್ಗೆಯಿಂದಲೆ ಮೋಡ ಕವಿದ ವಾತವರಣವಿದ್ದು. ನಗರದ ಕಬ್ಬನ ಪಾರ್ಕ್, ಚಾಮರಾಜಪೇಟೆ, ವಿಜಯನಗರ, ರೇಸ್ ಕೋರ್ಸ್ ರೋಡ್ ಸೇರಿದಂತೆ ಹಲವೆಡೆ ಸಾಧರಣ ಮಳೆಯಾಗಲಿದೆ.

ಇದನ್ನೂ ಓದಿ : ಇನ್ಶೂರೆನ್ಸ್​ ಹಣಕ್ಕೆ ತಂದೆಯನ್ನೆ ಕೊಲೆ ಮಾಡಿದ ಪಾಪಿ ಮಗ !

ಬೆಂಗಳೂರು ಸೇರದಂತೆ ರಾಮನಗರ, ಚಿತ್ರದುರ್ಗ, ಕರಾವಳಿ ಪ್ರದೇಶಗಳು ಮತ್ತು ಉತ್ತರ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

RELATED ARTICLES

Related Articles

TRENDING ARTICLES