Friday, December 27, 2024

ಸಿಲಿಂಡರ್​ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾ*ವು !

ಹುಬ್ಬಳ್ಳಿ : ಸಿಲಿಂಡರ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಾಲಾಧಾರಿಗಳು ಕಿಮ್ಸ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು. ಇದರಿಂದ ಬೇಸರಗೊಂಡ ಮತ್ತೊಬ್ಬ ಮಾಲಾಧಾರಿ ಅಯ್ಯಪ್ಪ ಸ್ವಾಮಿ ಮಾಲೆಯನ್ನು ತೆಗೆದು ಕಣ್ಣೀರಾಕಿದ್ದಾರೆ.‘

ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಾಲಯದಲ್ಲಿ ಸಿಲಿಂಡರ್​ ಸ್ಪೋಟಗೊಂಡು 9 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಬೆಂಕಿಯ ಕೆನ್ನಾಲಿಗೆ ಇಂದ ತೀವ್ರವಾಗಿ ಗಾಯಗೊಂಡಿದ್ದರು. ಇವರೆಲ್ಲರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ತಡರಾತ್ರಿ ಇಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು 65 ವರ್ಷದ ನಿಂಗಪ್ಪ ಮಲ್ಲಪ್ಪ ಬೇಪೂರು, 30 ವರ್ಷದ ಸಂಜಯ ಪ್ರಕಾಶ್ ಸವದತ್ತಿ ಎಂಬುವವರು ಮೃತಪಟ್ಟಿದ್ದಾರೆ.

ಉಳಿದ 6 ಜನ ಮಾಲಾಧಾರಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು. ಒರ್ವ ಮಾಲಾಧಾರಿ ಗುಣಮುಖರಾಗಿ ಸಾಮಾನ್ಯ ವಾರ್ಡ್​ಗೆ ಶಿಫ್ಟ್​​ ಮಾಡಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದೆ.

ಧರಿಸಿದ್ದ ಮಾಲೆಯನ್ನು ತೆಗೆದು ಕಣ್ಣೀರಾಕಿದ ಸ್ನೇಹಿತ !

ನಿಜಲಿಂಗಪ್ಪ ಬೇಪೂರು, ಸಂಜಯ್ ಸವದತ್ತಿ ಇಬ್ಬರು ಚಿಕೆತ್ಸೆ ಫಲಿಸದೇ ಸಾವಿಗೀಡಾದ ಹಿನ್ನಲೆಯಲ್ಲಿ ಬೇಸರಗೊಂಡ ಮಂಜುನಾಥ್​ ಎಂಬುವವರು ಅಯ್ಯಪ್ಪ ಸ್ವಾಮಿ ಮಾಲೆಯನ್ನು ತೆಗೆದಿದ್ದಾರೆ. ತುಂಬಾ ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಸೇವೆ ಮಾಡಿದೆವು. ಆದರೆ ನಡೆದ ದುರ್ಘಟನೆಯಿಂದ ತುಂಬಾ ಬೇಸರವಾಗಿದೆ. ಉಳಿದ 7 ಜನರನ್ನು ಉಳಿಸಿಕೊಡು ಎಂದು ಸ್ವಾಮಿ ಸನ್ನಿದಿಯಲ್ಲಿ ಪ್ರಾಥನೆ ಮಾಡಿದ್ದೇವೆ. ಅವು ಬದುಕಿದರೆ ಮುಂದೆ ಮಾಲೆ ಹಾಕುತ್ತೇನೆ. ಎಂದು ಮಂಜುನಾಥ್​ ಕಣ್ಣೀರು ಹಾಕಿದರು.

RELATED ARTICLES

Related Articles

TRENDING ARTICLES