Tuesday, December 24, 2024

ಬ್ಯಾಡ್ಮಿಂಟನ್​ ತಾರೆ ಪಿ,ವಿ ಸಿಂಧು ಮದುವೆ ಪೋಟೋ ವೈರಲ್​ : ಉದ್ಯಮಿಯ ಕೈಹಿಡಿದ ಒಲಂಪಿಕ್​ ತಾರೆ !

ರಾಜಸ್ಥಾನ : ಭಾರತದ ಖ್ಯಾತ ಬ್ಯಾಡ್ಮಿಂಟನ್​ ತಾರೆ ಪುಸರ್ಲಾ ವೆಂಕಟ ಸಿಂಧು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಉದ್ಯಮಿ ವೆಂಕಟ ದತ್ತ ಸಾಯಿ ಅವರ ಕೈಹಿಡಿದಿದ್ದಾರೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪಿವಿ ಸಿಂಧು ಮತ್ತು ವೆಂಕಟ ದತ್ತಾ ಸಾಯಿ ಅವರ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶುಭಕೋರಿದ ಅವರು, “ನಿನ್ನೆ ಸಂಜೆ ಉದಯಪುರದಲ್ಲಿ ನಡೆದ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು-ವೆಂಕಟ ದತ್ತ ಸಾಯಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ನನಗೆ ಸಂತೋಷವಾಯಿತು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೃತದೇಹದೊಂದಿಗೆ ಸಂಭೋಗ ಅತ್ಯಾಚಾರವಲ್ಲ: ಛತ್ತೀಸಗಢ ಹೈಕೋರ್ಟ್

ಈ ಮದುವೆ ಸಮಾರಂಭದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಸೇರಿದಂತೆ ಅನೇಕ ಕ್ರೀಡಾ ಗಣ್ಯರು ಭಾಹವಹಿಸಿದ್ದರು.

RELATED ARTICLES

Related Articles

TRENDING ARTICLES