ಬೆಂಗಳೂರು : ಇತ್ತೀಚೆಗೆ ಕರ್ನಾಟಕದಲ್ಲಿ ಬಾಣಂತಿಯರ ಸಾವಿನ ಸುದ್ದಿಗಳು ಕೇಳಿಬರುತ್ತಲೆ ಇದೆ. ಬಳ್ಳಾರಿಯ ವಿಮ್ಸ್, ಬೆಳಗಾವಿಯ ಬಿಮ್ಸ್ ನಂತರ ಬೆಂಗಳೂರಿನಲ್ಲಿಯೋ ಬಾಣಂತಿಯೊಬ್ಬರು ಸಾವನ್ನಪ್ಪಿದ್ದು. ಜನಿಸಿದ ಒಂದೆ ದಿನಕ್ಕೆ ಹಸುಗೂಸು ಕಂದಮ್ಮ ತಾಯಿಯನ್ನು ಕಳೆದುಕೊಂಡಿದೆ.
ನಿನ್ನೆ ಮಿನತಿ ಎಂಬ ಮಹಿಳೆ ಕೆ.ಸಿ ಜನರಲ್ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಹೆರಿಗೆಯೂ ಆಗಿತ್ತು. ಆದರೆ ಹೆರಿಗೆ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಆದ ಕಾರಣದಿಂದ ಮಹಿಳೆಯನ್ನು ಕೆ,ಸಿ ಜನರಲ್ ಆಸ್ಪತ್ರೆಯಿಂದ ವಾಣಿ ವಿಲಾಸ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಹೆಚ್ಚು ರಕ್ತಸ್ರಾವವಾಗಿದ್ದರು ಸಹ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓಧಿ : ಮಗುವನ್ನು ಶಾಲಾ ಬಸ್ಗೆ ಹತ್ತಿಸಲು ಹೋಗಿದ್ದ ತಾಯಿಗೆ ಕರೆಂಟ್ ಶಾಕ್: ನಡುರಸ್ತೆಯಲ್ಲಿ ಒದ್ದಾಡಿದ ಮಹಿಳೆ
ಇನ್ನು ಹುಟ್ಟಿದ ಒಂದೆ ದಿನಕ್ಕೆ ಹಸುಗೂಸು ತಾಯಿಯನ್ನು ಕಳೆದುಕೊಂಡಿದ್ದು. ಸರ್ಕಾರಿ ಆಸ್ಪತ್ರೆಯ ವೈದ್ಯರು ದಂಧೆ ನಡೆಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಆಸ್ಪತ್ರೆಯ ಮೇಲೆ ಆರೋಪ ಮಾಡಿದ್ದಾರೆ.