ಕೋಲಾರ : ನಗರದ ಹೊರವಲಯದಲ್ಲಿರುವ ಹಾಸ್ಟೆಲ್ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದ್ದು. ಮೃತ ಬಾಲಕಿಯನ್ನು ಬಿಂದುಶ್ರೀ ಎಂದು ಗುರುತಿಸಲಾಗಿದೆ.
ಕೋಲಾರಸ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಬೈರವೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಯುವತಿ ಕಾಲೇಜು ಹಾಸ್ಟೆಲ್ನಲ್ಲೆ ವಾಸವಾಗಿದ್ದಳು. ಆದರೆ ಇಂದು ಬಾಲಕಿ ಹಾಸ್ಟೆಲ್ ಮಂಚಕ್ಕೆ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಆತ್ನಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಮಾಹಿತಿ ದೊರತಿದೆ.
ಇದನ್ನೂ ಓದಿ: ಸರಣಿ ಅಪಘಾತ : ಓವರ್ ಟೇಕ್ ಮಾಡಲು ಹೋಗಿ ನಡೆಯಿತು ದುರ್ಘಟನೆ !
ಮೃತ ವಿದ್ಯಾರ್ಥಿನಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರೇಕಾಲುವೆ ಗ್ರಾಮದ 17 ವರ್ಷದ ಬಿಂದುಶ್ರೀ ಎಂದು ಗುರುತಿಸಿದ್ದು, ಶ್ರೀ ನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.