ಬೆಂಗಳೂರು : ಬಳ್ಳಾರಿ,ಬೆಳಗಾವಿ ಬೆನ್ನಲ್ಲೇ ಬೆಂಗಳೂರಲ್ಲೂ ಬಾಣಂತಿಯೊಬ್ಬರು ಸಾವನ್ನಪ್ಪಿದ್ದು. ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ ಎಂಬಾಕೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯವರ ನಿರ್ಲಕ್ಷದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿವಮೊಗ್ಗ ಆಸ್ಪತ್ರೆ ವೈದ್ಯರ ಎಡವಟ್ಟಿಗೆ ಬಲಿಯಾದಳ ಮಹಿಳೆ ?
ಮೂಲತಂ ಕಡೂರು ತಾಲ್ಲೂಕಿನ ಗರ್ಜೆ ಗ್ರಾಮದವರಾದ ಅನುಷಾ ತರೀಕೆರೆ ನರ್ಸಿಂಗ್ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿ ಮಾಡಿಸಿಕೊಂಡಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿಕೊಂಡಾಗ ವೈದ್ಯರು ಹೊಟ್ಟೆಯಲ್ಲಿ ಸ್ಟೋನ್ ಇದೆ ಎಂದು ಹೇಳಿದ್ದ ವೈದ್ಯರು ಡಿಲಿವರಿ ಆದ ಒಂದು ತಿಂಗಳಲ್ಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಂಡಿದ್ದರು.
ಇದನ್ನೂ ಓದಿ: ಕುರ್-ಕುರೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ : 10 ಜನ ಆಸ್ಪತ್ರೆಗೆ ದಾಖಲು !
ಆಪರೇಷನ್ ಮಾಡುವ ವೇಳೆ ಬಾಣಂತಿಯ ಕರುಳಿಗೆ ಗಾಯಮಾಡಿದ್ದರು. ಆದರೆ ಈ ವಿಷಯವನ್ನು ತಿಳಿಸದ ವೈದ್ಯರು ಮುಚ್ಚಿಟ್ಟಿದ್ದರು ಎಂದು ಬಾಣಂತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆಪರೇಷನ್ ನಡೆಸಿದ ನಂತರ ಮಹಿಳೆಯನ್ನು ಮನೆಗೆ ಕಳುಹಿಸಿದ್ದರು. ಆದರೆ ಮಹಿಳೆಯ ಕೈಕಾಲುಗಳಲ್ಲಿ ಊತ ಕಾಣಿಸಿಕೊಂಡ ಹಿನ್ನಲೆ ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ನಾರ್ಮಲ್ ಇದೆ ಎಂದು ಹೇಳಿದರು. ಆದರೆ ಶಿವಮೊಗ್ಗದ ಸ್ಥಳೀಯ ಆಸ್ಪತ್ರೆಯ ವೈದ್ಯರು ಮಹಿಳೆಗೆ ಜಾಂಡಿಸ್ ಇದೆ ಎಂದು ಹೇಳಿದ್ದರು.
ಬೆಂಗಳೂರಿನ ಆಸ್ಪತ್ರೆಯ ವೈದ್ಯರ ಮೇಲೂ ಕುಟುಂಬಸ್ಥರ ಆರೋಪ !
ಶಿವಮೊಗ್ಗದಿಂದ ಬಾಣಂತಿಯನ್ನು ಬೆಂಗಳೂರಿಗೆ ರವಾನೆ ಮಾಡಿದ್ದು. ನಾಗರಬಾವಿಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲು ಮಾಡಿದ್ದರು.
ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ದಿನಕ್ಕೊಂದು ಕತೆ ಹೇಳುತ್ತಿದ್ದು. ಸಿ,ಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್ ಮಾಡಿದ ನಂತರ ಕಳೆದ ಗುರುವಾರ ಲಿವರ್ ಪ್ರಾಬ್ಲಂ ಇದೆ ಎಂದು ಹೇಳಿದ್ದರು. ಶುಕ್ರವಾರ ಮತ್ತೆ ಅನುಷಾಗೆ ಆಪರೇಶನ್ ಮಾಡಿದ್ದರು. ಆದರೆ ಆಪರೇಶನ್ ಮಾಡಿದ ದಿನದಿಂದ ಮಹಿಳೆ ಕಣ್ಣು ತೆರೆದಿರಲಿಲ್ಲ. ಆದರೆ ಮತ್ತೆ ಬಂದ ವೈದ್ಯರು ಮಹಿಳೆಗೆ ಹಾರ್ಟ್ ಪ್ರಾಬ್ಲಂ ಇದೆ ಎಂದು ಹೇಳಿದ್ದರು.
ಆದರೆ ಇಂದು ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು. ಮಹಿಳೆಯ ಪತಿ ಆಸ್ಪತ್ರೆಯ ನಿರ್ಲಕ್ಷಕ್ಕೆ ಮಹಿಳೆ ಸಾವಾಗಿದೆ ಎಂದು ಆರೋಪಿಸಿದ್ದಾರೆ.