Monday, December 23, 2024

ದೇವಾಸ್ಥಾನದಲ್ಲಿ ಸಿಲಿಂಡರ್​ ಬ್ಲಾಸ್ಟ್​​ : ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸ್ಥಿತಿ ಚಿಂತಾಜನಕ !

ಹುಬ್ಬಳ್ಳಿ : ನಗರದ ಸಾಯಿನಗರದ ಈಶ್ವರ ದೇವಾಸ್ಥಾನದಲ್ಲಿ ತಡರಾತ್ರಿ ಸಿಲಿಂಡರ್​ ಬ್ಲಾಸ್ಟ್​ ಆಗಿದ್ದು. ದೇವಾಸ್ಥಾನದಲ್ಲಿ ಮಲಗಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯ ಈಶ್ವರ ದೇವಾಸ್ಥಾನದಲ್ಲಿ ತಡರಾತ್ರಿ ಅವಘಡ ಸಂಭವಿಸಿದ್ದು. ಗ್ಯಾಸ್​ ಲೀಕ್​ ಆಗಿ ದೇವಾಸ್ಥಾನದಲ್ಲಿ ಹಚ್ಚಿಟ್ಟಿದ್ದ ದೀಪದ ಸಂಪರ್ಕಕ್ಕೆ ಬಂದು ಸಿಲಿಂಡರ್ ಬ್ಲಾಸ್ಟ್​ ಆಗಿದೆ. ಸಿಲಿಂಡರ್​ ಬ್ಲಾಸ್ಟ್​ ಆದ ಪರಿಣಾಮ ದೇವಾಸ್ಥಾನದ ಮೇಲ್ಬಾಗದಲ್ಲಿ ಮಲಗಿದ್ದ 9 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ತೀವ್ರ ಗಾಯವಾಗಿದ್ದು. ದೇವಾಸ್ಥಾನದ ಕೆಳಭಾಗದಲ್ಲಿ ಮಲಗಿದ್ದ  ಮಾಲಾಧಾರಿಗಳು ಅವರನ್ನು ರಕ್ಷಿಸಿದ್ದಾರೆ. ಒಂದು ವೇಳೆ ಎಲ್ಲರು ಒಂದೆ ಕಡೆ ಮಲಗಿದ್ದರೆ ಭಾರಿ ದುರಂತ ಸಂಭವಿಸಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಭಾರಿ ದುರಂತ ಸಂಭವಿಸಿದೆ.

ಸದ್ಯ ಬೆಂಕಿಯ ಕೆನ್ನಾಲಿಗಯಿಂದ ಗಾಯಗೊಂಡಿರುವ ಒಂಭತ್ತು ಜನ ಮಾಲಾಧಾರಿಗಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ವಿದ್ಯಾನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES