ಹುಬ್ಬಳ್ಳಿ : ಯುವಕನೊಬ್ಬ ಬೀದಿನಾಯಿಯ ಹುಟ್ಟುಹಬ್ಬ ಆಚರಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ವೆಂಕರೆಡ್ಡಿ ಕಿರೇಸೂರು ಎಂಬ ಯುವಕ ನಾಯಿಯ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.
ನಿನ್ನೆಯಷ್ಟೆ ಕೋಲಾರದಲ್ಲಿ ಯುವಕನೊಬ್ಬ ತಾನು ಸಾಕಿದ್ದ ಎತ್ತಿನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ಇಂದು ಕೂಡ ಇದೇ ರೀತಿಯ ಸುದ್ದಿ ಬಂದ್ದಿದ್ದು. ಹುಬ್ಬಳ್ಳಿಯ ಯುವಕನೊಬ್ಬ ಬೀದಿ ನಾಯಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಚಿಕಿತ್ಸೆಗಾಗಿ ಅಮೇರಿಕಾಗೆ ಶಿವಣ್ಣ ಪ್ರಯಾಣ : ಮನೆಗೆ ಭೇಟಿ ನೀಡಿದ ಸುದೀಪ್ !
ಕಳೆದ ವರ್ಷ ವೆಂಕರೆಡ್ಡಿ ಮತ್ತು ಕುಟುಂಬಸ್ಥರು ತಿರುಪತಿಗೆ ಪಾದಯಾತ್ರೆ ಹೋಗಿದ್ದರು . ಈ ವೇಳೆ ನಾಯಿಯು ಕೂಡ ಇವರನ್ನು ತಿರುಪತಿಯವರೆಗೆ ಹಿಂಬಾಲಿಸಿತ್ತು. ಅಂದಿನಿಂದಲೂ ನಾಯಿಯನ್ನು ಸಾಕುತ್ತಿದ್ದರು. ಈ ಬಾರಿಯು ಕೂಡ ಕಿರೇಸೂರು ಕುಟುಂಬಸ್ಥರು ತಿರುಪತಿಗೆ ಪಾದಯಾತ್ರೆ ಹೋಗುತ್ತಿದ್ದು. ಇದರ ನಡುವೆ ನಾಯಿಯ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.
ಮನೆಯಲ್ಲಿಯೆ ನಾಯಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿರುವ ಕುಟುಂಬಸ್ಥರು. ಕೇಕ್ ಮೇಲೆ ರಾಕಿ ಎಂದು ಬರೆಸಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಹುಟ್ಟಹಬ್ಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಕುಟುಂಬಸ್ಥರು ಹಂಚಿಕೊಂಡಿದ್ದು. ಕುಟುಂಬಸ್ಥರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.