ಬೆಂಗಳೂರು : ಅನಾರೋಗ್ಯ ಹಿನ್ನಲೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಮೇರಿಕಾಗೆ ತೆರಳುತ್ತಿದ್ದು. ಇಂದು (ಡಿ.18) ಸಂಜೆ ಅಮೇರಿಕಾಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರ ನಡುವೆ ಇಂದು ನಟ ಸುದೀಪ್, ಬಿ.ಸಿ ಪಾಟೀಲ್ ಶಿವಣ್ಣನವರ ಮನೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದು. ಇದೇ ತಿಂಗಳು 24 ರಂದು ಅಮೇರಿಕಾದಲ್ಲಿ ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಜೆ ಶಿವಣ್ಣ ಇಂದು ಸಂಜೆ 5 ಗಂಟೆಗೆ ಏಪೋರ್ಟ್ಗೆ ಹೊರಡಲಿದ್ದು. ರಾತ್ರಿ 8;30ರ ಫ್ಲೈಟ್ನಲ್ಲಿ ಅಮೇರಿಕಾಗೆ ಹೊರಡಲಿದ್ದಾರೆ ಎಂದು ಮಾಹಿತಿ ದೊರೆತಿದೆ.
ಶಿವಣ್ಣನ ಜೊತೆ ಪತ್ನಿ ಗೀತಾ ಶಿವರಾಜ್ಕುಮಾರ್, ಮತ್ತು ಮಗಳು ನಿವೇದಿತಾ ಅಮೇರಿಕಾಗೆ ತೆರಳಲಿದ್ದು. ನಾಳೆ ಮಧು ಬಂಗಾರಪ್ಪ ಕೂಡ ತೆರಳಲಿದ್ದಾರೆ.