Wednesday, December 18, 2024

ಮಗನ ಹೆಗಲನ್ನು ಹಿಡಿದು ಆಸ್ಪತ್ರೆಯಿಂದ ಹೊರ ಬಂದ ದಾಸ ದರ್ಶನ್​ !

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ನಟ ದರ್ಶನ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು. ಮಗನ ಹೆಗಲನ್ನು ಹಿಡುದು ಆಸ್ಪತ್ರೆಯಿಂದ ಹೊರಬಂದ ನಟ ದರ್ಶನ್​ ತಮ್ಮ ಕಾರಿನಲ್ಲಿ ತಮ್ಮ ಮನೆಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಟ ದರ್ಶನ್​ ಮಧ್ಯಂತರ ಬೇಲ್​ ಪಡೆದು ಹೊರಬಂದು ಬಿಜಿಎಸ್​​ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 50 ದಿನಗಳಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಕಳ್ಳಾಟವಾಡುತ್ತಿದ್ದ ನಟ ದರ್ಶನ್​ ಸೋಮವಾರ ಹೈಕೋರ್ಟ್​ ನೀಡಿದ್ದ ರೆಗ್ಯುಲರ್​ ಜಾಮೀನಿನ ಪ್ರಕ್ರಿಯೆಯನ್ನು ಮುಗಿಸಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ದರ್ಶನ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ.

ನಟ ದರ್ಶನ್​ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸುವ ವೇಳೆ ನಟ ಧನ್ವೀರ್​​, ತಮ್ಮ ದಿನಕರ್​ ತೂಗೂದೀಪ, ಪತ್ನಿ ವಿಜಯ್​ ಲಕ್ಷ್ಮೀ, ಮಗ ವಿನೀಶ್​ ಆಸ್ಪತ್ರೆಯಲ್ಲಿ ಹಾಜರಿದ್ದರು. ಈ ವೇಳೆ ನಟ ದರ್ಶನ್​ ಆಸ್ಪತ್ರೆಯಿಂದ ಹೊರಬರುವಾಗ ಮಗ ವಿನೀಶ್​​ ಹೆಗಲ ಸರ್ಪೋಟ್​ ಪಡೆದುಕೊಂಡು ಹೊರಗೆ ಬಂದಿದ್ದು ವಿಶೇಷವಾಗಿತ್ತು.

RELATED ARTICLES

Related Articles

TRENDING ARTICLES