Monday, December 16, 2024

ಖ್ಯಾತ ತಬಲ ವಾದಕ ಜಾಕೀರ್​ ಹುಸೇನ್​ ಅಮೇರಿಕಾದಲ್ಲಿ ನಿಧನ !

ಅಮೇರಿಕಾ : (ಡಿ.15) ಭಾರದ ಪದ್ಮ ಪ್ರಶಸ್ತಿ ವಿಜೇತ, ಅತ್ಯಂತ ಜನಪ್ರಿಯ ತಬಲಾ ವಾದಕ ಜಾಕಿರ್ ಹುಸೈನ್ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಜಾಕಿರ್ ಹುಸೈನ್‌ರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಕಳೆದೊಂದು ವಾರದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಜಾಕಿರ್ ಹುಸೈನ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಜಾಕಿರ್ ಹುಸೈನ್ ನಿಧನರಾಗಿದ್ದಾರೆ.‘

ಜಾಕೀರ್​ ಹುಸೇನ್​ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು !

ಉಸ್ತಾದ್ ಜಾಕಿರ್ ಹುಸೈನ್ ಎಂದೇ ಖ್ಯಾತಿ ಗೊಂಡಿದ್ದ ತಬಲಾ ಮಾಂತ್ರಿಕ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಭಾರತದ ಶಾಸ್ತ್ರೀಯ ಸಂಗೀತ ಹಾಗೂ ವಿಶ್ವ ಸಂಗೀತಕ್ಕೆ ಜಾಕಿರ್ ಹುಸೈನ್ ಕೊಡುಗೆ ಅಪಾರವಾಗಿದೆ. 7ನೇ ವಯಸ್ಸಿಗೆ ತಬಲಾದಲ್ಲಿ ಸಾಧನೆ ಮಾಡಿದ ಜಾಕಿರ್ ಹುಸೈನ್, ವಿಶ್ವದೆಲ್ಲೆಡೆ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪದ್ಮಶ್ರಿ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಇಂತಹ ಜಾಕೀರ್​ ಹುಸೇನ್​ ಹೃದಯ ಸಂಬಂಧಿ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಕಳೆದ ವಾರ ಆಸ್ಪತ್ರೆ ದಾಖಲಾಗಿದ್ದರು. ಈ ಕುರಿತು ಜಾಕಿರ್ ಹುಸೈನ್ ಆಪ್ತ, ಕಲಾವಿದ ರಾಕೇಶ್ ಚೌರಾಸಿಯಾ ಮಾಹಿತಿ ನೀಡಿದ್ದರು. ಇದೀಗ ಜಾಕಿರ್ ಹುಸೈನ್ ನಿಧನ ವಾರ್ತೆ ಭಾರತಕ್ಕೆ ತೀವ್ರ ನೋವುಂಟು ಮಾಡಿದೆ.

ಉಸ್ತಾದ್ ಜಾಕಿರ್ ಹುಸೈನ್ ಎಂದೇ ಖ್ಯಾತಿ ಗೊಂಡಿದ್ದ ತಬಲಾ ಮಾಂತ್ರಿಕ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆನೇಕ ಬಾಲಿವುಡ್​ ನಟ-ನಟಿಯರು ಸಾಮಾಜಿಕ ಜಾಲತಾಣವಾದ ಎಕ್ಷ್​ನಲ್ಲಿ ಸಂತಾಪ ಸೂಚಿಸಿದ್ದು. ಕರ್ನಾಟಕ ಸಿಎಂ ಸಿದ್ದರಾಮಯ್ಯರು ಕೂಡ ಸಂತಾಪ ಸೂಚಿಸಿದ್ದಾರೆ . ಇಂತಹ ಜಾಕೀರ್​ ಹುಸೇನ್​ ಭಾರತದ ಶ್ರೇಷ್ಟ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರಿ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಬಲ ಸಾಧಕನಿಗೆ ಪ್ರಪಂಚ ನೀಡಿದ ಗೌರವ ಅಪಾರ!

ಖ್ಯಾತ ತಬಲ ವಾದಕ ಜಾಕೀರ್​ ಹುಸೇನ್​ರ ಸಾಧನೆಗೆ ವಿಶ್ವದ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಅದರಲ್ಲಿ ಅತ್ಯಂತ ಶ್ರೇಷ್ಟ ಪ್ರಶಸ್ತಿಯಾದ ಗ್ರ್ಯಾಮಿ ಪ್ರಶಸ್ತಿಯನ್ನು ಸುಮಾರು 5 ಬಾರಿ ಪಡೆದಿದ್ದಾರೆ.

ಅದಲ್ಲದೆ ಇಸ್ತಾಂಬುಲ್ ಫಿಲ್ಮ್ ಫೆಸ್ಟಿವಲ್, ಮುಂಬೈ ಫಿಲ್ಮ್ ಫೆಸ್ಟಿವಲ್, ನ್ಯಾಷನಲ್ ಫಿಲ್ಮ್ ಅವಾರ್ಡ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಜಾಕಿರ್ ಹುಸೈನ್‌ಗೆ ಸಂದಿದೆ. 2016ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶ್ವೇತಭವನದಲ್ಲಿ ಆಯೋಜಿಸಿದ ಆಲ್ ಸ್ಟಾರ್ ಗ್ಲೋಬಲ್ ಕಾನ್ಸರ್ಟ್ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನೀಡಿದ ಹೆಗ್ಗಳಿಗೆ ಜಾಕಿರ್ ಹುಸೈನ್‌ಗಿದೆ. 2018ರಲ್ಲಿ ಜಾಕಿರ್ ಹುಸೈನ್ ಸಾಧನೆ, ತಬಲಾ ಆರಂಭಿಕ ದಿನ ಸೇರಿದಂತೆ ಹಲವು ಕುತೂಹಲಗಳ ಪುಸ್ತಕ ಜಾಕಿರ್ ಹುಸೈನ್, ಎ ಲೈಫ್ ಇನ್ ಮ್ಯೂಸಿಕ್ ಪುಸ್ತಕ ಬಿಡುಗಡೆಯಾಗಿದೆ.

RELATED ARTICLES

Related Articles

TRENDING ARTICLES