ಹುಬ್ಬಳ್ಳಿ : ಕಾನೂನು ಕಾಪಾಡಬೇಕಾದ ಪೊಲೀಸ್ನೊಬ್ಬ ತಮ್ಮ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು. ಇನ್ಸ್ಪೆಕ್ಟರ್ ವಿರುದ್ದ ಠಾಣೆಯ ಮಹಿಳಾ ಸಿಬ್ಬಂದಿಗಳು ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ಹಳೆಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ಮೇಲೆ ಗಂಭೀರ ಆರೋಪ ಬಂದಿದ್ದು. ಸುರೇಶ್ ರಾತ್ರಿಯಾದರೆ ಮಹಿಳಾ ಸಿಬ್ಬಂದಿಗಳಿಗೆ ವಿಡಿಯೋ ಕರೆ ಮಾಡಿ ಕಾಮ ಪ್ರಚೋದಕ ಮತುಗಳನ್ನು ಆಡುತ್ತಾರೆ. ಕೆಟ್ಟದಾಗಿ ಅಸಹ್ಯ ಪದಗಳನ್ನು ಬಳಸಿಕೊಂಡು ಮಾತನಾಡುತ್ತಾರೆ. ಠಾಣೆಯಲ್ಲಿ ರಜೆ ಕೇಲಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿ ಸುಮಾರು 3 ಪುಟಗಳ ಪತ್ರವನ್ನು ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ಸ್ಪೆಕ್ಟರ್ ಕಿರುಕುಳಕ್ಕೆ ಬೇಸತ್ತಿರುವ ಮಹಿಳಾ ಸಿಬ್ಬಂದಿಗಳು ಸುಮಾರು ಪುಟಗಳಷ್ಟು ಪತ್ರವನ್ನು ಬರೆದಿದ್ದು. ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ಮಹಿಳಾ ಆಯೋಗಕ್ಕೆ ಪತ್ರ ಬರೆದು ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ.ಇನ್ಸ್ಪೆಕ್ಟರ್ ಮಾತಿನಿಂದ ಕುಟುಂಬದಲ್ಲಿ ಬಿರುಕುಗಳು ಮೂಡಿದ್ದು. ಇನ್ಸ್ಪೆಕ್ಟರ್ ಕಾಟದಿಂದ ಮುಕ್ತಿಕೊಡಿ ಎಂದು ಅಂಗಲಾಚಿದ್ದಾರೆ ಎಂದು ತಿಳಿದು ಬಂದಿದೆ.