ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರು ಮೃತಪಟ್ಟಿದ್ದು. ಅವರ ನೆನಪುಗಳನ್ನು ಅವರ ಒಡನಾಡಿಗಳು ಮತ್ತು ಅವರ ಹಿತೈಶಿಗಳು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ನಿರ್ಮಲಾನಂದ ಸ್ವಾಮೀಜಿಗಳು ಎಸ್ಎಂ ಕೃಷ್ಣರು ಈ ರಾಜ್ಯಕ್ಕೆ ಸಲ್ಲಿಸಿರುವ ಸೇವೆಗಳನ್ನು ನೆನಪಿಸಿಕೊಂಡಿದ್ದು. ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
SMK ಅವರ ಕುರಿತು ಮಾತನಾಡಿದ ನಿರ್ಮಲಾನಂದ ಸ್ವಾಮಜೀಗಳು ‘ಎಸ್ಎಂ ಕೃಷ್ಣ ಅವರು ಬೆಂಗಳೂರಿಗೆ ಅಂತರ್ರಾಷ್ಟ್ರೀಯ ಖ್ಯಾತಿ ತಂದು ಕೊಟ್ಟರು. ಅವರ ಕೆಲಸಗಳು ಎಲ್ಲರಿಗೂ ಮಾರ್ಗದರ್ಶನವಾಗಿ ಕಾರ್ಯನಿರ್ವಹಿಸುತ್ತವೆ. ಅವರು ಮಠದ ಸದ್ಭಕ್ತರಾಗಿದ್ದರು ಎಂದು ಅವರಿಗೆ ಸಂತಾಪ ಸೂಚಿಸಿದರು.
ಮುಂದುವರಿದು ಮಾತನಾಡಿದ ನಿರ್ಮಲಾನಂದ ಸ್ವಾಮೀಜಿ ‘ SMK ಅವರು ದೂರದೃಷ್ಟಿಯ ನಾಯಕರ ರೀತಿ ಗ್ಲೋಬಲ್ ವಾರ್ಮಿಂಗ್, ಕ್ಲೈಮೇಟ್ ಚೇಂಜ್ ಆಗುವಾಗ ಅದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಿದರು. ಇದಕ್ಕಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ಇವತ್ತು ಭಾರತದ ಆರ್ಥಿಕತೆಗೆ ಕರ್ನಾಟಕದ ಪಾತ್ರವಿದೆ ಎಂದರೆ ಅದು ಎಸ್ಎಂ. ಕೃಷ್ಣರು ನೀಡಿದ ಯೋಜೆನೆಗಳು ಕಾರಣವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಿರ್ಮಲಾನಂದ ಸ್ವಾಮೀಜಿಗಳು ಹೇಳಿಕೆ ನೀಡಿದರು.