Thursday, December 19, 2024

ಚಾಮರಾಜನಗರಕ್ಕೆ ಬಂದಾಗಲೆಲ್ಲಾ ನನ್ನ ಕುರ್ಚಿ ಗಟ್ಟಿಯಾಗಿದೆ : ಸಿದ್ದರಾಮಯ್ಯ

ಚಾಮರಾಜನಗರ : ಸಿಎಂ ಸಿದ್ದರಾಮಯ್ಯ ಇಂದು ಚಾಮರಾಜನಗರ ಪ್ರವಾಸ ಕೈಗೊಂಡಿದ್ದು. ಕೊಳ್ಳೇಗಾಲದ ಸತ್ತೇಗಾಲ ಎಂಬಲ್ಲಿ ಶಾಲಾ ಕಟ್ಟಡ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದು ಕೊಳ್ಳುತ್ತಾರೆ ಎಂದು ಹೇಳುತ್ತಾರೆ, ಆದರೆ ನಾನು ಇಲ್ಲಿಗೆ ಬಂದಾಗಲೆಲ್ಲಾ ಅಧಿಕಾರ ಕಳೆದುಕೊಂಡಿಲ್ಲ, ಬದಲಿಗೆ ಸಿಎಂ ಕುರ್ಚಿ ಗಟ್ಟಿಯಾಗಿದೆ.

ಸತ್ತೇಗಾಲದ ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ. ನಾನು ಈ ಶಾಲೆಯನ್ನು ಅತ್ಯಂತ ಉತ್ಸಾಹದಿಂದ ಉದ್ಘಾಟನೆ ಮಾಡುದ್ದೇನೆ. ಜಾನಪದ ಕಲೆಗಳ ತವರೂರು ಹಾಗೂ ದಕ್ಷಿಣದ ಗಡಿ ಈ ಚಾಮರಾಜನಗರ ಎಂದು ತಮ್ಮ ಹಳೆಯ ಗುರುಗಳಾದ ಬಿ.ರಾಚಯ್ಯನ್ನ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ನೆನೆದರು.

ಇದನ್ನು ಓದಿ : ಅವಕಾಶಗಳು ಹುಡುಕಿ ಬರೋದಿಲ್ಲ : ಅವನ್ನು ನಾವೇ ಸೃಷ್ಟಿಸಿಕೊಳ್ಳಬೇಕು : ಡಿ.ಕೆ ಶಿವಕುಮಾರ್​

ಚಾಮರಾಜನಗರಕ್ಕೆ ಬಂದವರ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಇರುವ ಮೂಡನಂಬಿಕೆಯ ಮೇಲೆ ಮಾತನಾಡಿದ ಸಿಎಂ ‘ ಜೆ.ಹೆಚ್ ಪಟೇಲರಿಗೆ ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದು ಕೊಳ್ಳುತ್ತೀರಾ ಅಂತ ಆಗಿನ ಕೆಲ ಶಾಸಕರು ಹೇಳಿದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಡ ನಂಬಿಕೆಯನ್ನು ರಾಚಯ್ಯ ಅವರು ನಂಬಲಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸಿಎಂ ಚಾಮರಾಜನಗರ ಜಿಲ್ಲೆಯನ್ನು ಹೊಸ ಜಿಲ್ಲೆಯಾಗಿ ನಾವು ಘೊಷಣೆ ಮಾಡಿದ್ವಿ. ಆಗ ನಾನು ಉಪಮುಖ್ಯಮಂತ್ರಿಯಾಗಿದ್ದೆ. ನಾನು ಏನಿಲ್ಲ ಅಂದರು ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಾರಿ ನಾನು ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲಾ ನಾನು ಅಧಿಕಾರ ಕಳೇದು ಕೊಂಡಿಲ್ಲ, ಅದರ ಬದಲಿಗೆ ನನ್ನ ಸಿಎಂ ಕುರ್ಚಿ ಗಟ್ಟಿಯಾಗಿದೆ. ಆದರೆ ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ, ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ದರೆ ರಾಜಕೀಯ ಉಳಿಗಾಲವಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES