Monday, December 23, 2024

ನಾಯಿ ಮರಿ ಮೇಲೆ ಕಾರು ಹತ್ತಿಸಿ ವಿಕೃತಿ: ಪ್ರಾಣಿಪ್ರಿಯರಿಂದ ಆಕ್ರೋಶ !

ಬೆಂಗಳೂರು : ಕೆಲವರು ಮಾನವರಾಗಿ ಹುಟ್ಟಿರುತ್ತಾರೆಯೆ ವಿನಃ ಅವರಲ್ಲಿ ಮಾನವೀಯ ಗುಣಗಳು ಒಂದು ಇರುವುದಿಲ್ಲ ಎಂಬುದಕ್ಕೆ ಈ ವರದಿ ಸಾಕ್ಷಿಯಾಗಿದೆ. ಬೆಂಗಳೂರಿನ ಖಾಸಗಿ ಅರ್ಪಾಟ್​ಮೆಂಟ್​ ನಿವಾಸಿಯೊಬ್ಬ ನಾಯಿ ಮರಿ ಮೇಲೆ ಕಾರು ಹರಿಸಿ ವಿಕೃತಿ ಮೆರೆದಿದ್ದು. ನಾಯಿ ಒದ್ದಾಡುತ್ತಿರುವುದನ್ನು ನೋಡಿದರು ಕೂಡ ಕಾರು ನಿಲ್ಲಿಸದೆ ಹೋಗಿ ತನ್ನ ವಿಕೃತಿಯ ಅತಿರೇಕತೆಯನ್ನು ತೋರಿಸಿದ್ದಾನೆ.

ಬೆಂಗಳೂರಿನ ವರ್ತೂರು ಬಳಿಯ ಬೆಳಗೆರೆಯ ಖಾಸಗಿ ಅಪಾರ್ಮೆಂಟ್ ನಲ್ಲಿ‌ ನಡೆದ ಘಟನೆ ನಡೆದಿದ್ದು. ಅಪಾರ್ಟಮೆಂಟ್​​ ಗೇಟ್​ನಲ್ಲಿ ತನ್ನ ಪಾಡಿಗೆ ಕುಳಿತಿದ್ದ ನಾಯಿಯ ಮೇಲೆ ಕಾರನ್ನು ಚಲಾಯಿಸಿ ವಿಕೃತಿಯನ್ನು ಮೆರೆದಿದ್ದಾನೆ.

ಕೃತ್ಯ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ವಿಡಿಯೋವನ್ನು ಎಕ್ಸ್​​ನಲ್ಲಿ ಬೆಂಗಳೂರು ಪೋಲಿಸರಿಗೆ ಟ್ಯಾಗ್​ ಮಾಡುವ ಮೂಲಕ ಕಾರು ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES