Thursday, December 5, 2024

ಗಂಟಲಲ್ಲಿ ಬಲೂನ್​ ಸಿಲುಕಿ 13 ವರ್ಷದ ಬಾಲಕ ಸಾವು : ಎಚ್ಚರ ಪೋಷಕರೆ !

ಕಾರವಾರ: ಮಕ್ಕಳಿಗೆ ಬಲೂನ್​ ಎಂದರೆ ಅದೇನೋ ಆಕರ್ಷಣೆ, ತಮ್ಮ ಶ್ವಾಸದಿಂದ ಊದಿ ಅದರಲ್ಲಿ ಆಟವಾಡುವುದಕ್ಕೆ ಸಾಮಾನ್ಯವಾಗಿ ಮಕ್ಕಳು ಇಷ್ಟ ಪಡುತ್ತವೆ. ಆದರೆ ಇಲ್ಲೊಬ್ಬ ಬಾಲಕನಿಗೆ ಬಲೂನೆ ಜೀವ ಕಂಟಕ ವಸ್ತುವಾಗಿ ಪರಿಣಮಿಸಿದೆ.

ಉತ್ತರ ಕನ್ನಡ ಜಿಲ್ಲೆಯ, ಹಳಿಯಾಳ ತಾಲ್ಲೂಕಿನ, ಜೋಗನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದ್ದು. ನವೀನ್​ ನಾರಾಯಣ ಬೆಳಗಾಂವಕರ ಎಂಬ 13 ವರ್ಷದ ಬಾಲಕ ಬಲೂನ್​ ಊದಲು ಹೋಗಿ ದುರ್ಘಟನೆ ಸಂಭವಿಸಿದೆ. ಬಲೂನ್​ ಊದುವ ಸಂದರ್ಭದಲ್ಲಿ ಬಲೂನ್​ ನುಂಗಿ ಅವಘಡ ಸಂಭವಿಸಿದ್ದು. ಬಾಲಕ ಉಸಿರನ್ನು ಎಳೆದುಕೊಳ್ಳಲಾಗದೆ ನರಳಿ ಪ್ರಾಣ ಬಿಟ್ಟಿದ್ದಾನೆ ಎಂದು ಮಾಹಿತಿ ದೊರೆತಿದೆ.

ಬಾಲಕ ನವೀನ್​ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ7ನೇ ತರಗತಿ ಓದುತ್ತಿದ್ದನು. ಆದರೆ ಭವ್ಯ ಭವಿಷ್ಯ ಕಾಣಬೇಕಾದ ಬಾಲಕನ ಬದುಕು ಈ ರೀತಿಯಾಗಿ ಅಂತ್ಯವಾಗಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ.

 

RELATED ARTICLES

Related Articles

TRENDING ARTICLES