Saturday, November 30, 2024

ಫೈನಾನ್ಸ್​ ಕಿರುಕುಳ : ಗರ್ಭಿಣಿ ಎನ್ನುವುದನ್ನು ನೋಡದೆ ಮನೆಯಿಂದ ಹೊರದೂಡಿದ ಅಧಿಕಾರಿಗಳು

ಹುಬ್ಬಳ್ಳಿ : ಮೈಕ್ರೋ ಫೈನಾನ್ಸ್​​ನಲ್ಲಿ ಸಾಲ ಪಡೆದಿದ್ದ ಕುಟುಂಬಸ್ಥರು ಅದನ್ನು ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿ ಫೈನಾನ್ಸ್​ ಅಧಿಕಾರಿಗಳು ಇಡೀ ಕುಟುಂಬವನ್ನೆ ಮನೆಯಿಂದ ಹೊರಗೆ ಹಾಕಿದ್ದಾರೆ. ಗರ್ಭಿಣಿ ಮಹಿಳೆಯಿದ್ದರು ಸಹ ಫೈನಾನ್ಸ್​ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದು. ಊಟ, ಮಾತ್ರೆ ನೀಡದೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮಕ್ತುಂಸಾಬ್​ ಎನ್ನುವವರು ಎಕ್ವಾಟಿಸ್ ಸ್ಮಾಲ್ ಫೈನಾನ್ಸ್ ನಿಂದ 40 ಸಾವಿರ ಸಾಲ ಪಡೆದಿದ್ದರು. ಆದರೆ ಅದನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸದ ಕಾರಣ ಬಡ್ಡಿಯೆಲ್ಲಾ ಸೇರಿ ಒಟ್ಟು 1.50 ಲಕ್ಷ ಹಣವನ್ನು ಹಿಂತಿರುಗಿಸಬೇಕು ಎಂದು ಫೈನಾನ್ಸ್​ ಸಿಬ್ಬಂದಿಗಳು ಹೇಳುತ್ತಿದ್ದಾರೆ.

ಇದೇ ಸಾಲವನ್ನು ನೆನ್ನೆ ವಸೂಲು ಮಾಡಲು ಫೈನಾನ್ಸ್​ ಸಿಬ್ಬಂದಿಗಳು ಬಂದಿದ್ದು. ಮನೆಯಲ್ಲಿದ್ದವರನೆಲ್ಲಾ ಮನೆಯಿಂದ ಹೊರಹಾಕಿದ್ದಾರೆ. ಗರ್ಭಿಣಿ ರೇಷ್ಮಾ ಜಮಾದಾರ ಎಂಬುವವರನ್ನು ಮನೆಯಿಂದ ಹೊರಹಾಕಿದ್ದು. ಮಾತ್ರೆಯನ್ನು ನೀಡದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇಡೀ ಕುಟುಂಬವನ್ನು ಮನೆಯಿಂದ ಹೊರಹಾಕಿ ಮನೆಯನ್ನು ಸೀಜ್​ ಮಾಡಿದ್ದು. ಗರ್ಭಿಣಿ ಮಹಿಳೆಗೆ ಊಟ, ಮಾತ್ರೆ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಊಟವಿಲ್ಲದೆ ಗರ್ಭಿಣಿ ಮಹಿಳೆ ರೇಷ್ಮಾ ಕುಸಿದು ಬಿದ್ದಿದ್ದು. ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES