Friday, November 29, 2024

ಚುನಾವಣೆಗಳಲ್ಲಿ ಸತತ ಹಿನ್ನಡೆ: ಸೋಲಿನ ಪರಾಮರ್ಶೆಗೆ ಮುಂದಾದ ಕಾಂಗ್ರೆಸ್​

ದೆಹಲಿ : ಚುನಾವಣೆಗಳಲ್ಲಿ ಸಾಲು ಸಾಲು ಸೋಲನುಭವಿಸಿರುವ ಕಾಂಗ್ರೆಸ್​​ ಪಕ್ಷ ಇದೀಗ ತಮ್ಮ ಸೋಲಿಗೆ ಕಾರಣದ ಬಗ್ಗೆ ಪರಾಮರ್ಶೆ ಮಾಡಲು ಮುಂದಾಗಿದ್ದು. ಕಾಂಗ್ರೆಸ್​ನ ಕೇಂದ್ರ ಕಛೇರಿಯಲ್ಲಿ ಇಂದು ಸಭೆ ನಡೆಸಿ ಚುನಾವಣೆಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

ದೆಹಲಿಯ ಜನಪಥ್​ನಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಇಂದು ಮಧ್ಯಾಹ್ನ 2:30ಕ್ಕೆ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು. ಸಭೆಯಲ್ಲಿ ಮಹರಾಷ್ಟ್ರ ಮತ್ತು ಹರಿಯಾಣದ ಹೀನಾಯ ಸೋಲಿಗೆ ಕಾರಣಗಳೇನು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

EVM ವಿರುದ್ದ ಆಂದೋಲನ ಬಗ್ಗೆ ಚರ್ಚೆ!

ಚುನಾವಣೆಗಳಲ್ಲಿ ಸೋಲುತ್ತಿರುವುದಕ್ಕೆ ಇವಿಎಂ ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್​ ಮತ್ತು ಮಿತ್ರ ಪಕ್ಷಗಳು ಇದರ ಬಗ್ಗೆ ರಾಷ್ಟ್ರದಾದ್ಯಂತ ಅಭಿಯಾನ ಕೈಗೊಳ್ಳುವ ಕುರಿತು ಚರ್ಚೆ ನಡೆಸುತ್ತಿವೆ. ನೀರೀಕ್ಷಿತ ಮಟ್ಟಕಿಂತ ಕಡಿಮೆ ಸೀಟುಗಳು ಬರುತ್ತಿರುವ ಹಿನ್ನಲೆಯಲ್ಲಿ ಇದರ ಕುರಿತು ಕಾಂಗ್ರೆಸ್​ ಅನುಮಾನ ವ್ಯಕ್ತಪಡಿಸುತ್ತಿದ್ದು. ಈ ಬಾರಿಯ ಮಹರಾಷ್ಟ್ರ ಚುನಾವಣೆ ಸೋತಾಗಲು ಕೂಡ ಇವಿಎಂ ಮೇಲೆ ಆರೋಪ ಹೊರಿಸಲಾಗಿದೆ.

ಇವಿಎಂ ಮೇಲೆ ನಿರಂತರ ಆರೋಪ ಹೊರಿಸಿರುವ ಕಾಂಗ್ರೆಸ್​ !

2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ಇವಿಎಂಗಳ ಪಾತ್ರದ ಬಗ್ಗೆ ಪ್ರಶ್ನೆ ಮಾಡಿದ್ದ ಕಾಂಗ್ರೆಸ್ 2022 ರ ಉದಯಪುರ ನವ ಸಂಕಲ್ಪ ಘೋಷಣೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಇದಾದ ನಂತರ ಹರಿಯಾಣದಲ್ಲಿ ಸೋತಿದ್ದ ಕಾಂಗ್ರೆಸ್​ ಮತ್ತೆ ಇವಿಎಂ ಹ್ಯಾಕ್​ ಆಗಿದೆ ಎಂಬ ಆರೋಪ ಮಾಡಿತ್ತು. ಅದರ ಹಿನ್ನಲೆಯಲ್ಲೆ ಮಹರಾಷ್ಟ್ರದ ಚುನಾವಣೆ ಫಲಿತಾಂಶ ಹೊರಬಂದಿದ್ದು. ಇಲ್ಲಿಯು ಕಾಂಗ್ರೆಸ್​ಗೆ ಹೀನಾಯ ಸೋಲಾದ ಬೆನ್ನಲೆ ಅನೇಕ INDIA ಒಕ್ಕೂಟದ ಅನೇಕ ನಾಯಕರು ಇವಿಎಂ ಮೇಲೆ ಆರೋಪ ಹೊರಿಸಿದ್ದರು.

ಸಭೆಗೆ ಹಾಜರಾಗಲಿದ್ದಾರೆ ಕಾಂಗ್ರೆಸ್​ನ ಘಟಾನುಘಟಿ ನಾಯಕರು !

ಇವೆಲ್ಲದರ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್​ ಪಕ್ಷ ಚರ್ಚೆ ನಡೆಸಲು ಸಭೆ ಕರೆದಿದ್ದು. ಈ ಸಭೆಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಭೆಗೆ ಹಾಜರಾಗಲಿದ್ದಾರೆ.

ಜೊತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಗೌರವ್ ಗೊಗಯ್, ಅಂಬಿಕಾ ಸೋನಿ, ಪ್ರಿಯಾಂಕಾ ಗಾಂಧಿ ವಾದ್ರಾ, ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೇವಾಲ, ಎ.ಕೆ.ಅ್ಯಂಟನಿ, ದಿಗ್ವಿಜಯ್​  ಸಿಂಗ್, ಶಶಿ ತರೂರ್, ಸಲ್ಮಾನ್ ಖುರ್ಷಿದ್, ಸಚಿನ್ ಪೈಲಟ್, ಚಿದಂಬರಂ, ಮುಕುಲ್ ವಾಸ್ನಿಕ್, ಮೀರಾ ಕುಮಾರ್, ಕಮಲೇಶ್ವರ್ ಪಟೇಲ್, ಕುಮಾರಿ ಶೆಲ್ಜಾ, ಜಿತೇಂದ್ರ ಸಿಂಗ್, ಜೈರಾಂ ರಮೇಶ್, ಜಗದೀಶ್ ಠಾಕೂರ್, ಗುಲಾಮ ಅಮಿದ್ ಮೀರ್, ದೀಪಕ್ ಬಾಬಾರಿಯಾ, ಚರಣ್ ಜಿತ್ ಸಿಂಗ್ ಚೆನ್ನಿ, ಬಾಳಸಾಹೇಬ್ ತೋರಠ್, ಆನಂದ್ ಶರ್ಮಾ, ಅವಿನಾಶ್ ಪಾಂಡೆ, ಅಜಯ್ ಮಾಕೆನ್, ಅಧಿರ್ ರಂಜನ್ ಚೌದರಿ, ಅಭಿಷೇಕ್ ಮನು ಸಿಂಗ್ವಿ, ರಘುವೀರ್ ರೆಡ್ಡಿ, ನಾಸೀರ್ ಹುಸೇನ್ ಟಿ.ಸಾಹು, ತಾರಿಕ್ ಅನ್ವರ್, ಭಾಗಿ

ವಿಶೇಷ ಆಹ್ವಾನದ ಮೇಲೆ ಕರ್ನಾಟಕದ ಸಿಎಂ.ಸಿದ್ದರಾಮಯ್ಯ  ಮತ್ತು ಡಿಸಿಎಂ. ಡಿಕೆ ಶಿವಕುಮಾರ್​ ಕೂಡ ಈ ಸಭೇಯಲ್ಲಿ ಹಾಜರಾಗಲಿದ್ದಾರೆ. ಉಳಿದಂತೆ ಎಲ್ಲಾ ರಾಜ್ಯದ ಕಾಂಗ್ರಸ್ ಅಧ್ಯಕ್ಷರು ಮತ್ತು ಅಧಿಕಾರವಿರುವ ರಾಜ್ಯದ ಸಿಎಂಗಳು ವಿಶೇಷ ಆಹ್ವಾನಿತರಾಗಿ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

 

RELATED ARTICLES

Related Articles

TRENDING ARTICLES