ಬೆಳಗಾವಿ: ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಪೋಲಿಸರು ಹೋಮ ಹವನದ ಮೊರೆ ಹೋಗಿದ್ದು. ಪೋಲಿಸ್ ಠಾಣೆಯಲ್ಲೆ ಹೋಮ-ಹವನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೋಲಿಸರ ಈ ಕೃತ್ಯಕ್ಕೆ ಸಾಮಾಜಿಕವಾಗಿ ಪರ ವಿರೋಧ ಚರ್ಚೆಗಳು ಆರಂಭವಾಗಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸರು ಅಪರಾಧ ಚಟುವಟಿಕೆ ಕಡಿಮೆಯಾಗಲಿ ಎಂದು ಹೋಮ ನಡೆಸಿದ್ದು. ಫೋಲಿಸ್ ಠಾಣೆಯಲ್ಲೆ ಪೂಜೆ ಸಲ್ಲಿಸಿ ಠಾಣೆ ಬಾಗಿಲಿಗೆ ಬೂದುಗುಂಬಳವನ್ನು ಹೊಡೆದು, ಅರಿಶಿಣ – ಕುಕುಂಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೋಲಿಸರು ಹೋಮದ ಮೊರೆ ಹೋಗಿದ್ದು. ಇತ್ತೀಚೆಗೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದ ಅಮಾನವೀಯ ಕೃತ್ಯವಾಗಿತ್ತು. ಎರಡು ದಿನದ ಹಿಂದೆ ಇದೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಗಾಗಿ ಗುಂಡಿನ ಸದ್ದು ಕೂಡ ಕೇಳಿ ಬಂದಿತ್ತು. ಇದಷ್ಟೆ ಅಲ್ಲದೆ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಸೇರಿದಂತೆ ಸುಮಾರು 45 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಪೋಲಿಸರು ಕೂಡ ಎಷ್ಟೆ ಪ್ರಯತ್ನ ಪಟ್ಟರು ಅಪರಾದ ಚಟುವಟಿಕೆಗಳು ಕಡಿಮೆಯಾಗದ ಹಿನ್ನಲೆ, ಪೋಲಿಸರು ದೇವರ ಮೊರೆ ಹೋಗಿದ್ದು. ಪೋಲಿಸ್ ಠಾಣೆಯಲ್ಲೆ ಹೋಮ- ಹವನ ಮಾಡುವ ಮೂಲಕ ಅಪರಾಧ ಕೃತ್ಯಗಳು ಕಡಿಮೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಪೋಲಿಸರ ಈ ಕೆಲಸಕ್ಕೆ ಜನರಿಂದ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು. ಪೋಲಿಸರೆ ಮೌಡ್ಯಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.