Tuesday, November 26, 2024

ಬಿಬಿಎಂಪಿ ಬಜೆಟ್​ಗೆ ಅಧಿಕಾರಿಗಳಿಂದ ಸಿದ್ದತೆ : 15 ಸಾವಿರ ಕೋಟಿ ಬಜೆಟ್​​ ಮಂಡನೆ ಸಾಧ್ಯತೆ

ಬೆಂಗಳೂರು : 2025-26 ನೇ ಸಾಲಿನ ಬಿಬಿಎಂಪಿ ಬಜೆಟ್​ಗೆ ಬಿಬಿಎಂಪಿ ಅಧಿಕಾರಿಗಳು ಸಿದ್ದತೆ ನಡೆಸಿದ್ದು.
ಈ ಬಾರಿ ವಲಯವಾರು ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದ್ದು. ಒಟ್ಟು ಎಂಟು ವಲಯಗಳಿದ್ದು ಪ್ರತಿಯೊಂದು ವಲಯಕ್ಕೂ ಒಂದೊಂದು ಬಜೆಟ್ ಮಂಡನೆ​​ ಮಾಡಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

ಬಿಬಿಎಂಪಿ ಕಾಯ್ದೆ-2020ರ ಅಡಿಯಲ್ಲಿ ವಲಯವಾರು ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದು. ಪ್ರತಿ ವಲಯವನ್ನು ನಿರ್ವಹಣೆ ಮಾಡಲು ಹಾಗೂ ಹಣ ಬಿಡುಗಡೆ ಮಾಡುವ ಅಧಿಕಾರವನ್ನು  ವಲಯ ಆಯುಕ್ತರಿಗೆ ನೀಡಲಾಗುತ್ತಿದೆ.

ಬೆಂಗಳೂರನ್ನು 8 ವಲಯವಾಗಿ ವಿಂಘಡಿಸಿದ್ದರು ಕೂಡ ಇಂದಿಗೂ ಬಿಬಿಎಂಪಿ ಕೇಂದ್ರಿಕೃತ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಇದೇ ಕಾರಣದಿಂದ ಈ ಬಾರಿಯ ಆಯವ್ಯಯ ಪತ್ರವನ್ನು ವಲಯವಾರು ವಿಂಘಡನೆ ಮಾಎಇ ಹಣ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ. ಇದೆ ಮೊದಲ ಬಾರಿಗೆ ಬಿಬಿಎಂಪಿ ಇಂತಹ ಯೋಜನೆಯನ್ನು ರೂಪಿಸಿದ್ದು. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾ‌ರ್ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರ ಹಂಚಿಕೆ ಆಗಿರುವುದರಿಂದ ವಲಯವಾರು ಬಜೆಟ್ ಮಂಡನೆ ಮಾಡಿದರೆ ಸೂಕ್ತ ಎಂದು ಚಿಂತನೆ ನಡೆಸಿದ್ದು.ಈ ಬಗ್ಗೆ ಈಗಾಗಲೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮೌಖಿಕವಾಗಿ ಸಮ್ಮತಿ ನೀಡಿದ್ದಾರೆ.  ವಲಯವಾರು ಬಜೆಟ್ ಮಂಡನೆ ಮಾಡುವುದಕ್ಕೆ ವಲಯವಾರು ಅಧಿಕಾರಿಗಳು ತಮ್ಮ ವಲಯದ ನಿರ್ವಹಣೆ ಕಾಮಗಾರಿ, ಕಚೇರಿ ವೆಚ್ಚ, ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ವರದಿ ಸಿದ್ದಪಡಿಸಿ ಬಿಬಿಎಂಪಿಯ ಹಣಕಾಸು ವಿಭಾಗಕ್ಕೆ ನೀಡುವಂತೆ ಸೂಚನೆ ನೀಡಿದ್ದಾರೆ.

14ರಿಂದ 15 ಸಾವಿರ ಕೋಟಿ ರು. ಬಜೆಟ್ ಮಂಡನೆ ಸಾಧ್ಯತೆ

ಕಳೆದ 2024-25ನೇ ಸಾಲಿನಲ್ಲಿ ಬಿಬಿಎಂಪಿಯು ₹12,369 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿತ್ತು.
ಸರ್ಕಾರ ಅನುಮೋದನೆ ವೇಳೆ ಹೆಚ್ಚುವರಿ ₹745 ಕೋಟಿ ನೀಡುವ ಭರವಸೆಯೊಂದಿಗೆ ಬಜೆಟ್​​ ಗಾತ್ರ ₹13,114 ಕೋಟಿ ಹೆಚ್ಚಿಸಿಲಾಗಿತ್ತು. ಪ್ರತಿ ವರ್ಷ ಸಾಮಾನ್ಯವಾಗಿ ಶೇ.5ರಿಂದ 8ರಷ್ಟು ಬಜೆಟ್ ಗಾತ್ರ ವಾರ್ಷಿಕವಾಗಿ ಹೆಚ್ಚಿಸಲಾಗುತ್ತದೆ. ಈ ಪ್ರಕಾರ, 2025-26ನೇ ಸಾಲಿನ ಬಿಬಿಎಂಪಿಯ ಆಯವ್ಯಯವು 14 ರಿಂದ 15 ಸಾವಿರ ಕೋಟಿ ರು. ಇರಲಿದೆ ಎಂದು ಊಹಿಸಲಾಗಿದೆ.

RELATED ARTICLES

Related Articles

TRENDING ARTICLES