ಬೆಂಗಳೂರು : ಬೆಲೆ ಏರಿಕೆ ಶಾಕ್ನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು. ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಯ ದರವನ್ನು ಹೆಚ್ಚಳ ಮಾಡಲಾಗಿದೆ. ಶೇಕಡಾ 20ರಷ್ಟು ದರ ಏರಿಕೆ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.
ಶೇ 20ರಷ್ಟು ಚಿಕಿತ್ಸಾ ದರ ಹೆಚ್ಚಳ ಮಾಡಿ ಎಂದು ರಾಜ್ಯ ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಿದ್ದು. ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗುತ್ತಿದೆ. ಬಿಎಂಸಿಆರ್‌ಐ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿ ದರ ಏರಿಕೆ ಮಾಡಲಾಗಿದ್ದು.ವಿಕ್ಟೋರಿಯಾ, ಮಿಂಟೋ ಕಣ್ಣಿನ ಆಸ್ಪತ್ರೆ, ವಾಣಿವಿಲಾಸ, ಟ್ರಾಮಾ ಕೇರ್‌ಗಳಲ್ಲಿ ದರ ಷರಿಷ್ಕರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.
ಇದರ ಕುರಿತಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು ‘ಬಹಳ ವರ್ಷಗಳ ಹಿಂದೆ ಆಸ್ಪತ್ರೆಗಳಲ್ಲಿ ದರ ಪರಿಷ್ಕರಣೆ ಆಗಿತ್ತು. ಈಗಿನ ಕಾಲಮಾನಕ್ಕೆ ತಕ್ಕಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಏರಿಕೆ ಅವಶ್ಯಕವಾಗಿದೆ. ಆದ್ದರಿಂದ ಜನರ ಮೇಲೆ ಹೊರೆ ಆಗದಂತೆ ದರ ಪರಿಷ್ಕರಣೆ ಮಾಡಲಾಗಿದೆ. ಎಲ್ಲದನ್ನು ಗ್ಯಾರಂಟಿಗೆ ಹೋಲಿಕೆ ಮಾಡಿ ದರ ಹೆಚ್ಚಳ ಮಾಡಿದ್ರು ಅನ್ನೋದು ತಪ್ಪು’ ಎಂದು ಹೇಳಿದ್ದಾರೆ.
ದರ ಹೆಚ್ಚಳ ಎಷ್ಟು ಅನ್ನೋದನ್ನ ನೋಡೋದಾದ್ರೆ?
1.ಜನರಲ್ ವಾರ್ಡ್ 2.ಸ್ಪೆಷಲ್ ವಾರ್ಡ್
ಹಳೆಯ ದರ- 15 ಹಳೆಯ ದರ- 750
ಹೊಸ ದರ- 20 ಹೊಸ ದರ 1000
3.ಒಪಿಡಿ ನೋಂದಣಿ 4.ಒಳರೋಗಿ ನೋಂದಣಿ
ಹಳೆಯ ದರ -10 ಹಳೆಯ ದರ 25
ಹೊಸ ದರ- 20 ಹೊಸ ದರ 50
5.ಒಳ ರೋಗಿ ಹಾಸಿಗೆ ದರ 6.ಪ್ರಮಾಣ ಪತ್ರ
ಹಳೆಯ ದರ- 30 ಹಳೆಯ ದರ 250
ಹೊಸ ದರ- 50 ಹೊಸ ದರ 300
7.ಮೆಡಿಕಲ್ ಬೋರ್ಡ್ ಪ್ರಮಾಣ ಪತ್ರ 8.ಆಹಾರ ಪಥ್ಯ
ಹಳೆಯ ದರ 350 ಹಳೆಯ ದರ- 50
ಹೊಸ ದರ 500 ಹೊಸ ದರ -100
ಈ ರೀತಿಯಾಗಿ ಆಸ್ಪತ್ರೆಯಲ್ಲಿ ಮೆಡಿಕಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.