ಮೈಸೂರು : ಮೂಡಾ ಹಗರಣದ ವಿಚಾರಣೆಗಾಗಿ ಮುಡಾದ ಹಿಂದಿನ ಆಯುಕ್ತ ನಟೇಶ್ ವಿಚಾರಣೆಗಾಗಿ ಲೋಕಾಯುಕ್ತ ಕಛೇರಿಗೆ ಆಗಮಿಸಿದ್ದು. ಕಛೇರಿಗೆ ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.
ಮೂಡಾ ಹಗರಣದ ಕುರಿತಂತೆ ಲೋಕಾಯುಕ್ತದಿಂದ ನಡೆಯುತ್ತಿರುವ ತನಿಖೆ ಚುರುಕಾಗಿದ್ದು. ಸಿಎಂ ಪತ್ನಿಗೆ 14 ಸೈಟ್ ಮಂಜೂರು ಮಾಡಿದ್ದ ಮುಡಾದ ಹಿಂದಿನ ಆಯುಕ್ತನಾಗಿದ್ದ ನಟೇಶ್ನನ್ನು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತದಿಂದ ನೋಟಿಸ್ ಕೊಟ್ಟ ಹಿನ್ನಲೆ ಇಂದು ಮೈಸೂರಿನ ದಿವಾನ್ಸ್ ರಸ್ತೆಯ ಲೋಕಾಯುಕ್ತ ಕಚೇರಿಗೆ ನಟೇಶ್ ಆಗಮಿಸಿದರು.
ಲೋಕಾಯುಕ್ತ ಕಚೇರಿಗೆ ಆಗಮಿಸುತ್ತಿದ್ದಂತೆ ಮಾಧ್ಯಮದ ಕ್ಯಾಮರಾ ಕಂಡು ಗರಂ ಆದ ನಟೇಶ್
‘ನನ್ನೇಕೆ ವಿಡಿಯೋ ಮಾಡ್ತೀದ್ದೀರಾ, ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ ಅಂತಾ ಇಂಗ್ಲೀಷ್ನಲ್ಲಿ ಮಾತನಾಡುತ್ತಾ ಗರಂ ಆದರು ಮತ್ತು ಕೈಯಲ್ಲಿ ತಂದಿದ್ದ ದಾಖಲೆಗಳನ್ನ ಟೇಬಲ್ ಮೇಲೆ ಕುಕ್ಕಿ ಮಾದ್ಯಮದವರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.