ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಮುಂದುವರಿದಿದ್ದು, ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದೆ ಎಂದು ಮಾಹಿತಿ ದೊರೆತಿದೆ. ಬೆಳೆ ಕಳೆದುಕೊಂಡು ರೈತರು ಹಣೆ ಬಡೆದುಕೊಂಡು ಕಣ್ಣೀರಿಟ್ಟಿದ್ದು ಅರಣ್ಯ ಇಲಾಖೆ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ವಳಲಹಳ್ಳ ಗ್ರಾಮದಲ್ಲಿ ಘಟನೆ ನಡೆದಿದ್ದು.ಹಸನಾಗಿ ಬೆಳೆದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ತಿಂದು, ತುಳಿದು ನಾಶ ಮಾಡಿರುವ ಘಟನೆಯಾಗಿದೆ. ಫಸಲಿಗೆ ಬಂದಿದ್ದ ಭತ್ತದ ಬೆಳೆಯನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದು. ಬೆಳೆ ನಷ್ಟಿಕ್ಕೆ ಸೂಕ್ರ ಪರಿಹಾರ ಕೊಡುವಂತೆ ರೈತರು ಆಗ್ರಹಿಸಿದ್ದಾರೆ.
ವಳಲಹಳ್ಳ ಗ್ರಾಮದ ಆನಂದಗೌಡ ಹಾಗೂ ಇತರೆ ರೈತರಿಗೆ ಸೇರಿದ ಭತ್ತದ ಗದ್ದೆಗಳು ನಾಶವಾಗಿದ್ದು.ಸಾಲ, ಸೂಲ ಮಾಡಿ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡಿನಿಂದ ಬೆಳೆ ನಾಶವಾಗಿದ್ದು ಇಷ್ಟೆಲ್ಲಾ ಆದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿ ಮೀತಿಮೀರಿದರು ಶಾಶ್ವತ ಪರಿಹಾರ
ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಹಿಡಿಶಾಪ ಹಾಕಿದ್ದಾರೆ.