ಬೆಂಗಳೂರು : ಮಾದನಾಯಕನಹಳ್ಳಿಯ ತಮ್ಮ ಫ್ಲಾಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ನಟ, ನಿರ್ದೇಶಕ ಗುರುಪ್ರಸಾದ್ ಅಂತ್ಯಕ್ರಿಯೆ ವಿಲ್ಸ್ನ ಗಾರ್ಡನ್ ಚಿತಾಗಾರದಲ್ಲಿ ನಡೆದಿದ್ದು. ಕರ್ನಾಟಕ ಚಿತ್ರರಂಗದ ಅಪ್ರತಿಮ ನಿರ್ದೇಶಕ ಗುರುಪ್ರಸಾದ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ತಮ್ಮ ಮನೆಯಲ್ಲಿಯೆ ಆತ್ಮಹತ್ಯೆಗೆ ಶರಣಾಗಿದ್ದ ಗುರುಪ್ರಸಾದರ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ ಅಕ್ಕ ಪಕ್ಕದ ಮನೆಯವರು ಪೋಲಿಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆದರಿಸಿ ಮನೆ ಬಳಿ ಬಂದು ಪರಿಶೀಲಿಸಿದ ಪೋಲಿಸರಿಗೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು ತಿಳಿದಿತ್ತು. ಪೋಲಿಸರು ಮಹಜರು ಮಾಡಿದ ನಂತರ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಶವ ಪರೀಕ್ಷೆ ನಡೆಸಲಾಯಿತು.
ವಿಲ್ಸನ್ ಗಾರ್ಡನ್ ವಿಧ್ಯುತ್ತ ಚಿತಾಗಾರದಲ್ಲಿ ಸಂಜೆ 7 ಗಂಟೆ ವೇಳೆಗೆ ಬ್ರಾಹ್ಮಣ ಸಮುದಾಯದ ಪ್ರಕಾರ ಗುರುಪ್ರಸಾದ ಅವರ ಅಂತ್ಯಕ್ರಿಯೆ ನೆರವೇರಿತು. ಗುರುಪ್ರಸಾದ್ ಅವರ ಸಹೋದರ ಮತ್ತು ಎರಡನೇ ಹೆಂಡತಿಯ ಸಹೋದರ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಗುರಪ್ರಸಾದ ಅವರ ಮೊದಲನೆ ಹೆಂಡತಿ ಆರತಿ ಮತ್ತು ಮಗಳು ಹಾಜರಿದ್ದರು.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ದುನಿಯಾ ವಿಜಯ್, ಧನಂಜಯ್
ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡು ಅನೇಕ ದಿನಗಳು ಕಳೆದ ಹಿನ್ನಲೆಯಲ್ಲಿ ಅವರ ಅಂತ್ಯಕ್ರಿಯೆಯನ್ನು ಬೇಗನೆ ಮಾಡಿಮುಗಿಸಲಾಯಿತು. ಇದರಿಂದಾಗಿ ಯಾರಿಗು ಅವರ ಅಂತಿಮ ದರ್ಶನ ಸಿಗಲಿಲ್ಲ. ಆದರೆ ನಟ ದುನಿಯಾ ವಿಜಯ್ , ಡಾಲಿ ಧನಂಜಯ್, ಸತೀಶ್ ನಿನಾಸಂ, ಯೋಗರಾಜ್ ಭಟ್ ಮತ್ತು ತಬಲಾ ನಾಣಿ ಸೇರಿದಂತೆ ಕೆಲವು ಸಿನಿಮಾ ಗಣ್ಯರು ಗುರುಪ್ರಸಾದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.