Tuesday, November 5, 2024

ಸಿನಿಮಾಗೂ ಸೈ, ರಿಯಾಲಿಟಿ ಶೋಗು ಜೈ: ಗುರುಪ್ರಸಾದ್​​ ಎಂಬ ಬಹುಮುಖ ಪ್ರತಿಭೆ ಇನ್ನಿಲ್ಲ

ಬೆಂಗಳೂರು : ನಟ, ನಿರ್ದೇಶಕ ಗುರುಪ್ರಸಾದ್​ ನಿಧನರಾಗಿದ್ದು. ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಬಳಿಯ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು. ಕನ್ನಡ ಸಿನಿಮಾ ರಂಗ ಒಬ್ಬ ಅತ್ಯುತ್ತಮ ನಿರ್ದೇಶಕನನ್ನು ಕಳೆದುಕೊಂಡಿದೆ. ತಮ್ಮ ಸಿನಿಮಾ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ನೀಡುತ್ತಿದ್ದ ಒಬ್ಬ ವ್ಯಕ್ತಿ ಇಂದು ಇಲ್ಲ ಎಂದು ಅರಗಿಸಿಕೊಳ್ಳಲು ಕನ್ನಡ ಚಿತ್ರಾಭಿಮಾನಿಗಳಿಗೆ ಕಷ್ಟಕರವಾದ ಸುದ್ದಿಯಾಗಿದೆ.

ಇಂತಹ ಗುರುಪ್ರಸಾದ್​ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ , ನಿರ್ದೇಶನ ಮಾಡಿದ್ದು ಅವುಗಳು ಯಾವುವು ಎಂದು ತಿಳಿದುಕೊಳ್ಳೋಣ.

ಗುರುಪ್ರಸಾದ್​ ನಿರ್ದೇಶಿಸಿದ ಸಿನಿಮಾಗಳು 

ಮಠ (2006), ಎದ್ದೇಳು ಮಂಜುನಾಥ(2009), ಡೈರೆಕ್ಟರ್​​ ಸ್ಪೆಷಲ್​​(2013), ಎರಡನೇ ಸಲ (2017), ರಂಗನಾಯಕ(2024).

ಇವರ ಎದ್ದೇಳು ಮಂಜುನಾಥ ಸಿನಿಮಾಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು.

ಗುರು ನಟಿಸಿದ ಸಿನಿಮಾಗಳು 

ಮಠ(2006), ಎದ್ದೇಳು ಮಂಜುನಾಥ(2009), ಮೈಲಾರಿ(2010), ಕಳ್​​ಮಂಜ(2011), ಹುಡುಗರು(2011), ಡೈರೆಕ್ಟರ್​​​ ಸ್ಪೆಷಲ್(2013)​, ವಿಜಲ್(2013)​​, ಕರೋಡ್​ಪತಿ(2014), ಜಿಗರ್​ ಥಂಡಾ(2016), ಅನಂತು vs ನಸ್ರುತ್(2018)​​, ಕುಷ್ಕ(2020), ಬಡವರಾಸ್ಕಲ್(2021)​, ಬಾಡಿಗಾರ್ಡ್(2022)​, ಮಠ(2022)  ಸಿನಿಮಾಗಳಲ್ಲಿ ಗುರುಪ್ರಸಾದ್​​ ಅಭಿನಯಿಸಿದ್ದರು.

ಗುರು ಭಾಗವಹಿಸಿದ ರಿಯಾಲಿಟಿ ಶೋಗಳು

  • ತಕದಿಮಿತಾ ಡ್ಯಾನ್ಸಿಂಗ್​ ಸ್ಟಾರ್​​ (2014)
  • ಬಿಗ್​ಬಾಸ್​ ಸೀಸನ್​ 2 (2014)
  • ಪುಟಾಣಿ ಪಂಟ್ರು ಸೀಸನ್​ 2 (2015)
  • ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್​​ (2016)
  • ಭರ್ಜರಿ ಕಾಮಿಡಿ (2017-2018)

ಈ ರೀತಿಯಾಗಿ ಬಹುಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರಾಂತರಾಗಿದ್ದ ಗುರುಪ್ರಸಾದ್​ ಆತ್ಮಹತ್ಯೆ ಮಾಡಿಕೊಂಡಿದ್ದು. ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಹೇಳಬಹುದು.

 

RELATED ARTICLES

Related Articles

TRENDING ARTICLES