ಬೆಂಗಳೂರು : ಕಳೆದ ತಿಂಗಳು ಅಕ್ಟೋಬರ್ 25ರಂದು HAL ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದನು. ಇದೀಗ ಈ ಪ್ರಕರಣಕ್ಕೆ ತಿರುವು ದೊರೆತಿದ್ದು ಯುವಕ ತನ್ನನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದ ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.
ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದ ರೋಹನ್. ರಾಮಮೂರ್ತಿನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು. ಆದರೆ ಕಳೆದ ಅಕ್ಟೋಬರ್ 25 ರಂದು ಬೆಳಗಿನ ಜಾವ 3ಗಂಟೆ ಸುಮಾರಿಗೆ ರೋಹನ್ ತನ್ನ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಸೇಲಂ ಬ್ರಿಡ್ಜ್ ಬಳಿ ಹೋಗುವಾಗ ಕಾಮಧೇನು ಸ್ವಸ್ಥ ಕೇಂದ್ರ ಮುಂಭಾಗದ ಡೆಡ್ ಎಂಡ್ನಲ್ಲಿನ ಕಬ್ಬಿಣದ ಸರಳಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದನು. ಪೋಲಿಸರು ಇದನ್ನು ಅಜಾಗರೂಕತೆಯಿಂದ ಸಂಭವಿಸಿದ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಬಿಟ್ಟಿದ್ದರು.
ಆದರೆ ಘಟನೆಯ ಬಗ್ಗೆ ಕುಟುಂಬ್ಥರು ಅನುಮಾನ ವ್ಯಕ್ತಪಡಿಸಿದ್ದು. ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದ ಕುಟುಂಬಸ್ಥರು ರೋಹನ್ನನ್ನು ಹಿಂದಿನಿಂದ ರಾಬರ್ಸ್ಗಳು ಹಿಂಬಾಲಿಸುತ್ತಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತನಿಖೆಗೆ ಆಗ್ರಹಸಿದ್ದಾರೆ. ರೋಹನ್ನನ್ನು ಹಿಂದಿನಿಂದ ಮೂವರು ಹಿಂಬಾಲಿಸಿದ್ದು ಅಪಘಾತ ಸಂಭವಿಸುತ್ತಿದ್ದಂತೆ ಆ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಕುಟುಂಬ್ಥರು ತನಿಖೆಗೆ ಮನವಿ ಮಾಡಿದ್ದಾರೆ.