ಬೆಂಗಳೂರು : ಕನ್ನಡ ರಾಜ್ಯೋತ್ಸವ ನಿಮಿತ್ತ ರಾಜ್ಯ ಸರ್ಕಾರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರು ತಪ್ಪಾಗಿ ಕನ್ನಡ ಪದಗಳನ್ನು ಉಚ್ಚರಿಸಿದ್ದು. ಇದನ್ನು ಪ್ರಶ್ನಿಸಿದ ಪವರ್ ಟಿವಿ ಮೇಲೆ ಸಚಿವರು ಗರಂ ಆಗಿದ್ದಾರೆ.
ಇಂದು ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರ ಕನ್ನಡ ತಾಳತಪ್ಪಿದ್ದು. ಸಿಎಂ ಎದುರಲ್ಲಿಯೇ ಮೇಲಿಂದ ಮೇಲೆ ತಪ್ಪಾಗಿ ಕನ್ನಡ ಮಾತನಾಡಿದ್ದಾರೆ. ಭಾಷಣ ಮಾಡುವ ಭರದಲ್ಲಿ ಶಿಕ್ಷಣ ಸಚಿವರು ‘ಸಂಗತಿ’ ಎನ್ನುವ ಬದಲು ‘ಸಂಗಾತಿ’, ದುರಸ್ಥಿ ಎನ್ನುವ ಬದಲು ದುಸ್ಥಿತಿ, ‘ಮನುಜರು’ ಎನ್ನುವ ಬದಲು ‘ಮಜುರ್’, ಮತ್ತು ‘ಸಹಬಾಳ್ವೆ’ ಬದಲಾಗಿ ‘ಸಹಬಾಳ್ಮೆ’ ಈ ರೀತಿಯಾಗಿ ಅಸ್ಪಷ್ಟವಾಗಿ ಕನ್ನಡ ಮಾತನಾಡಿದ್ದಾರೆ.
ಇದನ್ನು ಪ್ರಶ್ನಿಸಿದ ಪವರ್ ಟಿವಿ ಆ್ಯಂಕರ್ ಮೇಲೆ ಶಿಕ್ಷಣ ಸಚಿವರು ಗರಂ ಆಗಿದ್ದು. ನಮ್ಮ ಒಳ್ಳೆ ಕೆಲಸಗಳನ್ನು ತೋರಿಸದೆ, ನಾವು ಮಾಡುವ ತಪ್ಪುಗಳನ್ನು ಮಾತ್ರ ತೋರಿಸುತ್ತೀರ ಎಂದು ಹೇಳಿದ್ದಾರೆ. ಕೊನೆಯ ಪಕ್ಷ ತಮ್ಮ ತಪ್ಪುಗಳಿಗೆ ಕ್ಷಮೆಯನ್ನು ಯಾಚಿಸಿದೆ ಪವರ್ ಟಿವಿಯವರ ಮೇಲೆ ಗೂಬೆ ಕೂರಿಸಲು ಯತ್ನಿಸಿದ್ದಾರೆ. ಪವರ್ ಟಿವಿ ಕೇಳಿದ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದ ಸಚಿವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕರೆಯನ್ನು ಕಟ್ ಮಾಡಿ ತಾವು ತಪ್ಪು ಮಾಡಿದರು, ಕ್ಷಮೆ ಕೇಳುವುದಿಲ್ಲ ಎಂದು ಅಹಂ ತೋರಿಸಿದ್ದಾರೆ.