Friday, November 1, 2024

ಬಿಪಿಎಲ್​ ಕಾರ್ಡ್​ದಾರರಿಗೆ ಮಾತ್ರ ಸೀಮಿತವಾಗುತ್ತಾ ಶಕ್ತಿ ಯೋಜನೆ ?

ಬೆಂಗಳೂರು : ಕಾಂಗ್ರೆಸ್​ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಯನ್ನು ಪರಿಷ್ಕರಿಸಲಾಗುತ್ತದೆಯೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದ್ದು. ಎರಡು ದಿನದ ಹಿಂದೆ ವಿಧಾನಸೌದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ನೀಡಿದ ಹೇಳಿಕೆ ಈ ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ ನೆನ್ನೆ ಕೆಪಿಸಿಸಿ ಕಾರ್ಯಲಯದಲ್ಲಿ ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕೂಡ ಗ್ಯಾರಂಟಿಯ ಪರಿಷ್ಕರಣೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.

ಶಕ್ತಿಯೋಜನೆಯಿಂದಾಗಿ ಸರ್ಕಾರ ಮೇಲೆ ಆರ್ಥಿಕವಾಗಿ ಭಾರೀ ಹೊರೆಯಾಗುತ್ತಿದ್ದು. ಇದನ್ನು ತಪ್ಪಿಸಲು ಸರ್ಕಾರ ತನ್ನ ಯೋಜನೆಯನ್ನು ಕೇವಲ ಬಿಪಿಎಲ್​ ಕಾರ್ಡ್​ದಾರರಿಗೆ ಮಾತ್ರ ನೀಡಲು ಚಿಂತಿಸುತ್ತಿದೆ ಎಂದು ಮಾತುಗಳು ಕೇಳಿಬಂದಿವೆ. ಆದ್ದರಿಂದ ಸರ್ಕಾರಿ ನೌಕರರು, ಶ್ರೀಮಂತರು , ಐಟಿ ಉದ್ಯೋಗಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಕಡಿವಾಣ ಹಾಕಿ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ದೊರೆತಿದೆ.

ಯೋಜನೆಯನ್ನ ಕೇವಲ ಬಡವರಿಗೆ ಮಾತ್ರ ಸೀಮಿತ ಮಾಡಲು ಸರ್ಕಾರದ ಪ್ಲ್ಯಾನ್ ರೂಪಿಸಿದ್ದು.
ಅನ್ನಭಾಗ್ಯ ಸ್ಕೀಂ ರೀತಿ ಬಿಪಿಎಲ್ ಕಾರ್ಡ್ ಇದ್ರೆ ಮಾತ್ರ ಬಸ್ ಫ್ರೀ ಮಾಡಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಪ್ರಸ್ತುತ ಶಕ್ತಿ ಯೋಜನೆಗೆ ವಾರ್ಷಿಕ ₹ 5,500 ಕೋಟಿಗು ಹೆಚ್ಚು ಹಣ ಬೇಕಾಗಿದ್ದು. ಒಂದು ವೇಳೆ ಕೇವಲ ಬಿಪಿಎಲ್ ಕಾರ್ಡ್ ದಾರರಿಗೆ ಯೋಜನೆಯನ್ನು ಸೀಮಿತ ಮಾಡಿದ್ರೆ ₹2500-₹3000 ಕೋಟಿ ಉಳಿತಾಯ ಆಗುತ್ತದೆ ಎಂದು ಚಿಂತಿಸಲಾಗಿದೆ.

ಶಕ್ತಿ ಯೋಜನೆಯ ಆರಂಭದಲ್ಲಿ ಸರ್ಕಾರ ಸ್ಮಾರ್ಟ್​ ಕಾರ್ಡ್​ ಕೊಡೋದಾಗಿ ಹೇಳಿತ್ತು. ಇದಕ್ಕೆ 30 ಕೋಟಿ ಖರ್ಚು ಮಾಡಬೇಕಿತ್ತು. ಆದರೆ ಇದುವರೆಗೂ ಸ್ಮಾರ್ಟ್ ಕಾರ್ಡನ್ನ ಜಾರಿಗೆ ತಂದಿಲ್ಲ. ಸಂಪೂರ್ಣ ಯೋಜನೆಯನ್ನು ರದ್ದುಗೊಳಿಸಿದರೆ ದೊಡ್ಡ ಮಟ್ಟದ ಮುಜುಗರಕ್ಕೆ ಒಳಗಾಗಬೇಕಾಗುವುದರಿಂದ ಸರ್ಕಾರ ತನ್ನ ಯೋಜನೆಯನ್ನು ಸಿಮೀತಗೊಳಿಸಿಕೊಳ್ಳುವ ಯೋಜನೆ ರೂಪಿಸಿದೆ ಎಂದು ತಿಳಿಯಲಾಗಿದೆ.

RELATED ARTICLES

Related Articles

TRENDING ARTICLES