ಬೆಳಗಾವಿ : ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಕಳೆಗಟ್ಟಿದ್ದು. ಗಡಿಜಿಲ್ಲೆ ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೆ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ರಾತ್ರಿಯಿಂದಲೇ ಸಂಭ್ರಮಾಚರಣೆ ಕಳೆಗಟ್ಟಿದ್ದು. ಕನ್ನಡ ಪರ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಅದ್ದೂರಿಯಾಗಿ ರಾತ್ಯೋತ್ಸವವನ್ನು ಆಚರಿಸಿದರು.
ರಾಜ್ಯೋತ್ಸವದ ನಿಮಿತ್ತ ಕೇಕ್ಕಟ್ ಮಾಡಿ ಕನ್ನಡಪರ ಜಯಘೋಷಗಳನ್ನು ಘೋಷಿಸಿದ ಕನ್ನಡ ಕಾರ್ಯಕರ್ತರು ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಬೆಳಗಾವಿಯ ಚೆನ್ನಮ್ಮ ವೃತ್ತದ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡಿದ್ದು ಬೆಳಗಾವಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇಂದು ಬೆಳಿಗ್ಗೆ ಮೆರವಣಿಗೆ ನಡೆಯಲಿದ್ದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೋಳಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಮುಂದುವರಿದ MES ಪುಂಡಾಟ
ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು. ಇದಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸನಿಂದ ಕರಾಳ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಕರಾಳ ದಿನ ಆಚರಣೆಗೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದೆ ಇದ್ದರು ಎಂಇಎಸ್ ಪುಂಡರಿಂದ ಮೆರವಣಿಗೆ ನಡೆಯುತ್ತಿದ್ದು. ಕರ್ನಾಟಕದ 865 ಪ್ರದೇಶಗಳನ್ನು ಮಹರಾಷ್ಟ್ರಗೆ ಸೇರಿಸಬೇಕು ಎಂದು ಅಗ್ರಹಿಸಿ ಈ ಮೆರವಣಿಗೆ ಮಾಡುತ್ತಿದ್ದಾರೆ.
ಬೆಳಗಾವಿಯ ಸಂಭಾಜೀ ಮೈದಾನದಿಂದ ಕರಾಳ ದಿನದ ಮೆರವಣಿಗೆ ಆರಂಭವಾಗಿದ್ದು. ಕಪ್ಪು ಪಟ್ಟಿ ಧರಿಸಿ ವಿವಿಧ ಬಡಾವಣೆಯಲ್ಲಿ ಮೆರವಣಿಗೆ ಮಾಡಲಾಗುತ್ತಿದೆ. ಎಂಇಎಸ್ ಕಾರ್ಯಕರ್ತರಿಂದ ಮಹರಾಷ್ಟ್ರ ಪರ ಘೋಷಣೆಗಳನ್ನು ಕೂಗುತ್ತಿದ್ದು ಮೆರವಣಿಗೆಗೆ ಪೋಲಿಸರು ಬಿಗಿಭದ್ರತೆಯನ್ನು ಒದಗಿಸಿದ್ದಾರೆ. ಕರಾಳ ದಿನದ ಮೆರವಣಿಗೆ ನಡೆಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು.ಇದನ್ನು ವಿರೋಧಿಸಿ ಮೆರವಣಿಗೆ ಮಾಡಲಾಗುತ್ತಿದೆ.