ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಕೊನೆಗು ಜೈಲಿನಿಂದ ಹೊರ ಬಂದಿದ್ದು. ಇಂದು ಬೆಳಿಗ್ಗೆ ಹೈಕೋರ್ಟ್ ದರ್ಶನ್ಗೆ ಷರತ್ತುಬದ್ದ ಜಾಮೀನು ನೀಡಿದ್ದ ಹಿನ್ನಲೆಯಲ್ಲಿ ಇಂದೇ ಎಲ್ಲಾ ಪ್ರಕ್ರಿಯೆಯನ್ನು ಮುಗಿಸಿ ಜೈಲಿನಿಂದ ದರ್ಶನ್ನನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ.
ಜಾಮೀನು ನೀಡಿದ ಆದೇಶ ಹೊರಗೆ ಬರುತ್ತಿದ್ದಂತೆ ದರ್ಶನ್ ಅಭಿಮಾನಿಗಳು ರಾಜ್ಯಾದ್ಯಂತ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ದರ್ಶನ್ ಪತ್ನಿ ವಿಜಯ್ಲಕ್ಷ್ಮಿ ಜೈಲಿಗೆ ಭೇಟಿ ನೀಡಿ ದರ್ಶನ್ಗೆ ದೇವರ ಪ್ರಸಾದ ನೀಡಿದರು. ಅಲ್ಲಿಂದ ಹೊರಬಂದ ವಿಜಯ್ಲಕ್ಷ್ಮಿ ನೇರವಾಗಿ ಬಳ್ಳಾರಿಯ ದುರ್ಗಮ್ಮ ದೇವರ ದರ್ಶನಕ್ಕೆ ಹೋಗಿ ದೇವರ ದರ್ಶನ ಪಡೆದರು.
ಜಾಮೀನು ಕೊಟ್ಟ ನಟ ಧನ್ವೀರ್
ದರ್ಶನ್ ಸ್ನೇಹಿತ ಮತ್ತು ಚಿತ್ರ ನಟ ಧನ್ವೀರ್ ನ್ಯಾಯಾಲಯಕ್ಕೆ ಭೇಟಿ ನೀಡಿ ದರ್ಶನ್ ಪರವಾಗಿ ಜಾಮೀನು ನೀಡಿದರು. ಇವರ ಜೊತೆಗೆ ದರ್ಶನ್ ತಮ್ಮ ದಿನಕರ್ ತೂಗುದೀಪ್ ಮತ್ತೊಬ್ಬ ಜಾಮೀನುದಾರರಾಗಿ ನ್ಯಾಯಲಯಕ್ಕೆ ಜಾಮೀನು ನೀಡಿದರು. ಇಂದೇ ಎಲ್ಲಾ ಷರತ್ತುಗಳನ್ನು ಪೂರೈಸಿದ ದರ್ಶನ್ ಪರ ವಕೀಲರು ಜೈಲಾಧಿಕಾರಿಗಳಿಗೆ ಕೋರ್ಟ್ನಿಂದ ನೀಡಿದ್ದ ಆದೇಶದ ಪ್ರತಿಯನ್ನು ನೀಡಿ ಜೈಲಿನಿಂದ ಹೊರಗೆ ಕರೆತಂದರು.
ಕೈಬಿಡಲಿಲ್ಲ ಕೈಹಿಡಿದ ಪತ್ನಿ
ದರ್ಶನ್ ಒಂದು ವೇಳೆ ಯಾರಿಗಾದರು ಧನ್ಯಾವಾದ ಅರ್ಪಿಸಬೇಕಾದರೆ ಅದು ಆತನ ಪತ್ನಿಗೆ ಎಂದು ಹೇಳಬಹುದು. ಭೂಮಿ ತೂಕದ ಹೆಣ್ಣು ಮಕ್ಕಳು ಮಾತ್ರ ಈ ರೀತಿ ತನ್ನ ಪತಿಗಾಗಿ ಹೋರಾಟ ನಡೆಸುತ್ತಾರೆ. ದರ್ಶನ್ ಜೈಲಿಗೆ ಹೋದ ದಿನದಿಂದಲು ದರ್ಶನ್ ಕೈ ಬಿಡದ ವಿಜಯ್ಲಕ್ಷ್ಮಿ ಪ್ರತಿನಿತ್ಯ ದೇವರ ಬಳಿ ಬೇಡುತ್ತಾ, ವಕೀಲರನ್ನು ನೇಮಿಸಿ ಕೊನೆಗು ತನ್ನ ಪತಿಯನ್ನು ಜೈಲಿಗೆ ಕರೆತರುವಲ್ಲಿ ಸಫಲರಾಗಿದ್ದಾರೆ.