Tuesday, December 3, 2024

ಮತ್ತೇ RCB ನಾಯಕತ್ವ ವಹಿಸಿಕೊಳ್ಳುತ್ತಾರ ವಿರಾಟ್​ ? ಮ್ಯಾನೇಜ್​ಮೆಂಟ್​ನಿಂದ ಮನವಿ

ಐಪಿಎಲ್​​ 2025ರ ಸೀಸನ್​​ ಆರಂಭಕ್ಕೆ ಎಲ್ಲಾ ಫ್ರಾಂಚೈಸಿಗಳು ತಯಾರಿ ಆರಂಭಿಸದ್ದು. ಅಕ್ಟೋಬರ್​ 31 ರಂದು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಯಾವ ತಂಡ ಯಾರನ್ನು ಉಳಿಸಿಕೊಳ್ಳುತ್ತವೆ ಎನ್ನುವ ಕುತೂಹಲ ಹೆಚ್ಚಾಗಿದ್ದು. ಆರ್​ಸಿಬಿ ತಂಡದಲ್ಲಿ ಯಾರೆಲ್ಲಾ ಉಳಿಯುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಮಧ್ಯ ದೊಡ್ಡ ಸುದ್ದಿಯೊಂದು ಸಿಕ್ಕಿದ್ದು. ವಿರಾಟ್​ಕೊಹ್ಲಿ ಮತ್ತೇ ಆರ್​ಸಿಬಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

2021 ರ ಐಪಿಎಲ್​​ ಆವೃತ್ತಿ ಬಳಿಕ ವಿರಾಟ್​ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಐಪಿಎಲ್​ ಮಾತ್ರವಲ್ಲದೆ ಭಾರತ ಏಕದಿನ ಮತ್ತು ಟಿ20 ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು. ಆದರೆ ಈಗ 2024ರಲ್ಲಿ ಭಾರತ ಟಿ20 ವಿಶ್ವಕಪ್​ ಗೆದ್ದ ಬಳಿಕ ನಿವೃತ್ತಿ ಘೋಷಿಸಿದ್ದರು. ಈಗ ಅಂತರ್​ ರಾಷ್ಟ್ರೀಯ ಕ್ರಿಕೆಟ್​ಗೆ ವಿಧಾಯ ಹೇಳಿರುವ ಕೊಹ್ಲಿ ಹೊರೆ ಕಡಿಮೆಯಾದ ಹಿನ್ನಲೆ ಮತ್ತೆ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬ ಮಾಹಿತಿ ದೊರಕಿದೆ.

ಈಗಾಗಲೇ ಆರ್​ಸಿಬಿ ಮ್ಯಾನೇಜ್​ಮೆಂಟ್ ಕೊಹ್ಲಿಯ​ ಜೊತೆ ಚರ್ಚಿಸಿದ್ದು. ಫಾಪ್​ ಡುಪ್ಲೆಸಿಗೆ 40 ವರ್ಷವಾದ ಹಿನ್ನಲೆ ಮತ್ತೆ ವಿರಾಟ್​ ಕೊಹ್ಲಿಯವರಿಗೆ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದೆ ಎಂಬ ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES