ಚಾಮರಾಜನಗರ : ವಿದ್ಯುತ್ ತಂತಿ ತಗುಲಿ, ಸ್ಥಳದಲ್ಲೇ ಇಬ್ಬರ ಸಾವನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಅಯ್ಯನಪುರ ಗ್ರಾಮದಲ್ಲಿ ಘಟನೆ. ರಾತ್ರಿ ವೇಳೆ ತಮ್ಮ ಜಮೀನಿಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು. ಇಬ್ಬರು ರೈತರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ವಿದ್ಯುತ್ ಶಾಕ್ನಿಂದ ಸಾವನ್ನಪ್ಪುವವರ ಸಂಖ್ಯೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ರೈತರೇ ಹೆಚ್ಚು ಬಲಿಯಾಗುತ್ತದ್ದಾರೆ. ಇವುಗಳಿಂದ ಕಾಡು ಪ್ರಾಣಿಗಳು ಸಹ ಹೊರತಾಗಿಲ್ಲ. ಮಳೆ ಹೆಚ್ಚಾಗಿರುವುದರಿಂದ ವಿದ್ಯುತ್ ತಂತಿಗಳು ಕೆಳಗೆ ಬಿದ್ದು ಅವಘಡಗಳು ಸಂಭವಿಸುತ್ತಿವೆ.
ಇದೇ ರೀತಿಯಾಗಿ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಇಬ್ಬರು ಮರಣ ಹೊಂದಿರುವ ಧಾರುಣ ಘಟನೆ ಚಾಮರಾಜನಗರದ ಅಯ್ಯನಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಾಗೇಂದ್ರ (45) ಮತ್ತು ಮಲ್ಲೇಶ (43) ಎಂದು ಗುರುತಿಸಿದ್ದು. ರಾತ್ರಿ ಸಮಯದಲ್ಲಿ ಬೈಕ್ನಲ್ಲಿ ತಮ್ಮ ಜಮೀನಿಗೆ ಹೋಗುತ್ತಿದ್ದ ಇಬ್ಬರು ರೈತರಿಗೆ ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ಚಾಮರಾಜನಗರ ರಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.