ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆ ಕ್ಷಣದಿಂದ ಕ್ಷಣಕ್ಕೆ ಕಾವು ಪಡೆಯುತ್ತಿದ್ದು. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾದ ಹಿನ್ನಲೆ NDA ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಈಗ ಜನರಲ್ಲಿ ಒಡಾಡುತ್ತಿದೆ. ಒಂದು ಕಡೆ ಜೆಡಿಎಸ್ ನಿಂದ ನಿಖಿಲ್ ಕುಮಾರ್ಸ್ವಾಮಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಮಾಹಿತಿ ದೊರೆತಿದ್ದರೆ. ಮತ್ತೊಂದು ಕಡೆಯಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ನಿಂದ ಹೀಗಾಗಲೆ 3-4 ಹೆಸರುಗಳ ಚರ್ಚೆ ಆಗುತ್ತಿದ್ದು.ಚನ್ನಪಟ್ಟಣ ಮುಖಂಡರ ಸಭೆ ಬಳಿಕ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ. ನಿಖಿಲ್ ಕುಮಾರಸ್ವಾಮಿ, ಜಯಮುತ್ತು, ಅನಿತಾ ಕುಮಾರಸ್ವಾಮಿ ಹೆಸರುಗಳ ಬಗ್ಗೆ ಚರ್ಚೆಯಾಗುತ್ತಿದ್ದು.ಮಧ್ಯಾಹ್ನ ಚನ್ನಪಟ್ಟಣದ ಮುಖಂಡರ ಸಭೆ ಬಳಿಕ ಅಭ್ಯರ್ಥಿ ಫೈನಲ್ ಮಾಡೋ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆಯುತ್ತಿದೆ.
ಕಾರ್ಯಕರ್ತರಿಗೆ ಟಿಕೆಟ್ ಕೊಡೋ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿದ್ದು.ಕಾರ್ಯಕರ್ತನಿಗೆ ಟಿಕೆಟ್ ಕೊಡೋದು ಫೈನಲ್ ಆದ್ರೆ ಜಯಮುತ್ತು ಅಭ್ಯರ್ಥಿ ಆಗೋ ಸಾಧ್ಯತೆ ಹೆಚ್ಚಿದೆ. ಆದರೆಕಾರ್ಯಕರ್ತರು ಒತ್ತಡ ಜಾಸ್ತಿ ಇರುವುದರಿಂದ ನಿಖಿಲ್ ಸ್ಪರ್ಧೆ ಸಾಧ್ಯತೆ ಹೆಚ್ಚಿದೆ ಎಂದು ಮಾಹಿತಿ ದೊರೆತಿದೆ.
ನಿನ್ನೆ ಸಭೆಯಲ್ಲಿ ನಿಖಿಲ್ ಅಥವಾ ಅನಿತಾ ಕುಮಾರಸ್ವಾಮಿ ನಿಲ್ಲಿಸಲು ಒತ್ತಡ ಹಾಕಿದ್ದ ಕಾರ್ಯಕರ್ತರು. ಹೀಗಾಗಿ 3 ಜನರಲ್ಲಿ ಒಬ್ಬರಿಗೆ ಟಿಕೆಟ್ ಫೈನಲ್ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು.ಎಲ್ಲವನ್ನೂ ಕಾದು ನೋಡಿ ಕೊನೇ ಕ್ಷಣದಲ್ಲಿ ಅನುಸೂಯಮ್ಮರನ್ನ ಕಣಕ್ಕಿಳಿಸಿ. DK ಬ್ರದಸ್ಗೆ ಶಾಕ್ ನೀಡಲು HDK ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ದೊರೆತಿದೆ.