ಕಾಸಿ ಕಮ್ಮಾರನಾದ.. ಬೀಸಿ ಮಡಿವಾಳನಾದ.. ಹಾಸನಿಕ್ಕಿ ಸಾಲಿಗನಾದ.. ವೇದವನೋದಿ ಹಾರುವನಾದ.. ಹೀಗೆ ಜಾತಿ ವ್ಯವಸ್ಥೆಯ ಹಿನ್ನೆಲೆಯನ್ನು ಸಾರಿ ಸಾರಿ ಹೇಳಿದ್ದಾರೆ ಅಣ್ಣ ಬಸವಣ್ಣ.. ಅಂತೆಯೇ ಕುರುಬರ ಹಟ್ಟಿಯಲ್ಲಿ ಹುಟ್ಟಿ ಬೆಳೆದ ಈ ಕಾಯಕ ಯೋಗಿ ತಮ್ಮ ಸೇವಾ ಕಾರ್ಯಗಳ ಮೂಲಕವೇ ಜನಜನಿತರಾಗಿದ್ದಾರೆ. ಬೆಂಗಳೂರು ಹೊರ ವಲಯದ ಆನೇಕಲ್ ಇವರ ಕಾರ್ಯಕ್ಷೇತ್ರವಾದರೆ, ಇಡೀ ರಾಜ್ಯವೇ ತನ್ನ ಸೇವಾಕ್ಷೇತ್ರ ಎಂದು ಪರಿಗಣಿಸಿರೋ ಇವರೇ ಎಂ.ದೊಡ್ಡಯ್ಯ.
ಆನೇಕಲ್ನಲ್ಲಿಯೇ ಇವರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿವರೆಗೆ ವ್ಯಾಸಂಗ ಮಾಡಿದ್ರು.. ಬಾಲ್ಯದಲ್ಲೇ ಸ್ಕೌಟ್ ಮತ್ತು ಗೈಡ್ಸ್ನಲ್ಲಿ ಸಕ್ರಿಯರಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ರು. ಬಳಿಕ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸದಸ್ಯರಾಗಿ, ಹಿಂದೂ ಸಮಾಜೋತ್ಸವಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ರು. ಇವರ ಸೇವಾ ಕಾರ್ಯ ಗುರುತಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ತಾಲ್ಲೂಕು ಕಾರ್ಯದರ್ಶಿಯಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಸಮಿತಿ ಸದಸ್ಯರಾಗಿ ಹೊಣೆಗಾರಿಕೆ ವಹಿಸಿತ್ತು. ಆ ವೇಳೆ ಹತ್ತಾರು ವಿದ್ಯಾರ್ಥಿ ಹೋರಾಟಗಳನ್ನು ರೂಪಿಸುವಲ್ಲಿ ಇವರದ್ದು ಮಹತ್ವದ ಪಾತ್ರ. ಹೀಗೆ ಸಂಘದ ಅಡಿಪಾಯದಲ್ಲೇ ಬೆಳೆದ ಇವರಿಗೆ ಬಿಜೆಪಿಯ ಬಾಗಿಲು ಕೂಡ ತೆರೆದಿತ್ತು. ಆನೇಕಲ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಬೆಂಗಳೂರು ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ. ಜನಪರ ಹೋರಾಟಗಳನ್ನು ನಿಭಾಯಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಮಾಜಮುಖಿ ಸೇವೆಗೆ ಆದರ್ಶ ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಸಂಘ ಸ್ಥಾಪಿಸಿದ್ದಾರೆ. ಕ್ರೀಡಾ ಕೂಟ, ಆರೋಗ್ಯ ಮೇಳ, ಜನಜಾಗೃತಿಗೆ ಬೈಕ್ ಜಾಥ, ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ, ರಕ್ತದಾನ, ಅನ್ನದಾನದಂತಹ ಸೇವೆಗಳ ಮೂಲಕ ಜನಜನಿತರಾಗಿದ್ದಾರೆ. ಜೊತೆಗೆ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಯನ್ನೂ ಸ್ಥಾಪಿಸಿ ವಿದ್ಯಾದಾನಕ್ಕೂ ಮುಂದಾಗಿರುವುದು ಹೆಮ್ಮೆಯೇ ಸರಿ.
ಹಂತ ಹಂತವಾಗಿ ತಮ್ಮ ಸೇವೆ ವಿಸ್ತರಿಸುವ ಆಶಯದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ರು. ಗದಗ ಜಿಲ್ಲೆ ರೋಣ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ರು. ಇವರ ಸರಳತೆ, ಸೇವಾ ಕಾರ್ಯ ಕೇಳಿ ತಿಳಿದ ಅಲ್ಲಿಯ ಜನರು, ಪ್ರಚಾರದಲ್ಲಿ ದುಡ್ಡು ಕೊಟ್ಟು ಜೈಕಾರ ಮೊಳಗಿಸಿದ್ರು. ಇವ ನಮ್ಮವ ಎಂಬ ಅಭಿಮಾನದಿಂದ ಕುರಿಗಳನ್ನು ಕಾಣಿಕೆ ನೀಡಿ ಹಳ್ಳಿ ಹಳ್ಳಿಗಳಲ್ಲಿ ಕುರುಬ ಸಮುದಾಯದವರು ಗೌರವಿಸಿದ್ರು. ಹಾಗೆಯೇ ಹೋದಲ್ಲಿ ಬಂದಲ್ಲಿ ಸರ್ವ ಜನರ ಸೇವಾ ಕಾರ್ಯದ ಮೂಲಕ ಜನಜನಿತರಾಗಿದ್ದಾರೆ ಎಂ.ದೊಡ್ಡಯ್ಯ. ಹೆಸರಿಗೆ ತಕ್ಕಂತೆ ಮತ್ತಷ್ಟು ದೊಡ್ಡ ಸೇವೆಗಳ ಮೂಲಕ ಸಮಾಜದಲ್ಲಿ ಮನ್ನಣೆ ಪಡೆಯಲಿ ಎಂಬುವುದು ಪವರ್ ಟಿವಿಯ ಶುಭ ಹಾರೈಕೆ. ಅದೇ ಹೆಮ್ಮೆಯಿಂದಲೇ ಇವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲು ಅತ್ಯಂತ ಹರ್ಷ ಪಡುತ್ತೇವೆ.
ಕಾಸಿ ಕಮ್ಮಾರನಾದ.. ಬೀಸಿ ಮಡಿವಾಳನಾದ.. ಹಾಸನಿಕ್ಕಿ ಸಾಲಿಗನಾದ.. ವೇದವನೋದಿ ಹಾರುವನಾದ.. ಜಾತಿ ವ್ಯವಸ್ಥೆಯ ಹಿನ್ನೆಲೆಯನ್ನು ಹೀಗೆ 12ನೇ ಶತಮಾನದಲ್ಲೇ ಸಾರಿ ಸಾರಿ ಹೇಳಿದ್ದಾರೆ ಅಣ್ಣ ಬಸವಣ್ಣ.. ಅಂತೆಯೇ ಕುರುಬರ ಹಟ್ಟಿಯಲ್ಲಿ ಹುಟ್ಟಿ ಬೆಳೆದ ಈ ಕಾಯಕ ಯೋಗಿ ತಮ್ಮ ಸೇವಾ ಕಾರ್ಯಗಳ ಮೂಲಕವೇ ಜನಜನಿತರಾಗಿದ್ದಾರೆ. ಬೆಂಗಳೂರು ಹೊರ ವಲಯದ ಆನೇಕಲ್ ಇವರ ಕಾರ್ಯಕ್ಷೇತ್ರವಾದ್ರೆ.. ಇಡೀ ರಾಜ್ಯವೇ ತನ್ನ ಸೇವಾಕ್ಷೇತ್ರ ಎಂದು ಪರಿಗಣಿಸಿದ್ದಾರೆ.. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬುವುದರ ಮರ್ಮವನ್ನು ಸರಿಯಾಗೇ ಅರಿತಿರುವ ಇವರೇ ಎಂ.ದೊಡ್ಡಯ್ಯ.
ಆನೇಕಲ್ನಲ್ಲಿಯೇ ಇವರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿವರೆಗೆ ವ್ಯಾಸಂಗ ಮಾಡಿದ್ರು.. ಬಾಲ್ಯದಿಂದಲೂ ಇವರದ್ದು ಶಿಸ್ತಿನ ಜೀವನ.. ಸ್ಕೌಟ್ ಮತ್ತು ಗೈಡ್ಸ್ನಲ್ಲಿ ಸಕ್ರಿಯರಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಶಿಸ್ತಿನ ಜೀವನ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದತ್ತ ಸೆಳೆದಿತ್ತು. ಹಲವು ವರ್ಷಗಳ ಕಾಲ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ರು. ನಗರ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಕೊಟ್ಟ ಜವಾಬ್ದಾರಿಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ರು. ಹಿಂದೂ ಸಮಾಜೋತ್ಸವಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ರು. ಇವರ ಸೇವಾ ಕಾರ್ಯವನ್ನು ಗುರುತಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಸಹ ಮಹತ್ವದ ಹೊಣೆಗಾರಿಕೆ ವಹಿಸಿತ್ತು. ತಾಲ್ಲೂಕು ಕಾರ್ಯದರ್ಶಿಯಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಸಮಿತಿ ಸದಸ್ಯರಾಗಿ.. ಹತ್ತು ಹಲವು ವಿದ್ಯಾರ್ಥಿ ಹೋರಾಟಗಳನ್ನು ರೂಪಿಸಿ, ನ್ಯಾಯ ದೊರಕಿಸುವಲ್ಲಿ ಇವರದ್ದು ಮಹತ್ವದ ಪಾತ್ರ..
ಸಂಘದ ಅಡಿಪಾಯದಲ್ಲೇ ಶಿಸ್ತಿನ ಸಿಪಾಯಿಯಾಗಿ ಬೆಳೆದು ಬಂದ ಇವರಿಗೆ, ಬಿಜೆಪಿಯ ಬಾಗಿಲು ಕೂಡ ತೆರೆದಿತ್ತು. ಆನೇಕಲ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಬೆಂಗಳೂರು ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ.ಹಲವು ಜನಪರ ಹೋರಾಟಗಳನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಇವರದ್ದು ಮಹತ್ವದ ಪಾತ್ರ.
ಇನ್ನು ಇತ್ತೀಚಿನ ವರ್ಷಗಳಲ್ಲಿ ಸಮಾಜಮುಖಿ ಸೇವೆಗೆ ಇವರು ತಮ್ಮದೇ ಆದ ಸಂಘಟನೆ ಸ್ಥಾಪಿಸಿದ್ದಾರೆ. ಆದರ್ಶ ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಸಂಘ ಸ್ಥಾಪಿಸಿ, ಸಾಮಾಜಿಕ ಸೇವೆ ಕೈಗೊಂಡಿದ್ದಾರೆ. ವಿವೇಕಾನಂದರ ಜಯಂತಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಕ್ರೀಡಾ ಕೂಟ, ಆರೋಗ್ಯ ಮೇಳ, ಜನಜಾಗೃತಿಗೆ ಬೈಕ್ ಱಲಿ, ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ, ರಕ್ತ ದಾನ, ಅನ್ನದಾನದಂತಹ ಸೇವೆಗಳ ಮೂಲಕ ಜನಜನಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿ ವಿದ್ಯಾದಾನಕ್ಕೂ ಮುಂದಾಗಿರುವುದು ಹೆಮ್ಮೆಯೇ ಸರಿ.
ಹೀಗೆ ಹಂತ ಹಂತವಾಗಿ ತಮ್ಮ ಸೇವಾ ಕ್ಷೇತ್ರ ಮತ್ತಷ್ಟು ವಿಸ್ತರಿಸುವ ಮಹದಾಸೆಯಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇವರು ಸ್ಪರ್ಧಿಸಿದ್ರು. ಗದಗ ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರು. ಇವರ ಸರಳತೆ, ಸೇವಾ ಕಾರ್ಯ ಕೇಳಿ ತಿಳಿದ ಅಲ್ಲಿಯ ಜನರು, ಪ್ರಚಾರದಲ್ಲಿ ದುಡ್ಡು ಕೊಟ್ಟು ಜೈಕಾರ ಮೊಳಗಿಸಿದ್ರು. ಇವ ನಮ್ಮವ ಎಂಬ ಅಭಿಮಾನದಿಂದ ಕುರಿಗಳನ್ನು ಕಾಣಿಕೆ ನೀಡಿ ಹಳ್ಳಿ ಹಳ್ಳಿಗಳಲ್ಲಿ ಕುರುಬ ಸಮುದಾಯದವರು ಗೌರವಿಸಿದ್ರು. ಹೀಗೆ ತಮ್ಮ ಬದುಕಿನಲ್ಲಿ ಎಂ. ದೊಡ್ಡಯ್ಯ ಅವರು ಸಹ, ಇವನಾರವ ಇವನಾರವ ಎನ್ನದೇ.. ಹೋದಲ್ಲಿ ಬಂದಲ್ಲಿ ಇವ ನಮ್ಮವ ಇವ ನಮ್ಮವ ಎಂದು ಸರ್ವ ಜನರ ಸೇವಾ ಕಾರ್ಯದ ಮೂಲಕ ಸಾರ್ಥಕ ಜೀವನ ಸಾಗಿಸಿದ್ದಾರೆ. ಯುವ ಮನಸ್ಸುಗಳಿಗೆ ಸ್ಫೂರ್ತಿಯಾಗಿ, ಹೆಸರಿಗೆ ತಕ್ಕಂತೆ ಮತ್ತಷ್ಟು ದೊಡ್ಡ ಸೇವೆಗಳ ಮೂಲಕ ಗುರುತಿಸಿಕೊಳ್ಳುವಂತಾಗಲಿ ಎಂಬುವುದು ಪವರ್ ಟಿವಿಯ ಹಾರೈಕೆ.. ಅದೇ ಹೆಮ್ಮೆಯಿಂದಲೇ ಇವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲು ಅತ್ಯಂತ ಹರ್ಷ ಪಡುತ್ತೇವೆ.