Tuesday, November 5, 2024

ಮಾನವೀಯತೆ ದೃಷ್ಟಿಯಿಂದ ಕೇರಳದ ವ್ಯಕ್ತಿಗೆ ಪರಿಹಾರ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕರ್ನಾಟದ ಆನೆ ದಾಳಿಗೆ ಕೇರಳದ ವ್ಯಕ್ತಿಗೆ ಪರಿಹಾರ ನೀಡಿರುವ ವಿಚಾರಕ್ಕೆ  ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾನವೀಯತೆ ದೃಷ್ಟಿಯಿಂದ ಕೇರಳದ ವ್ಯಕ್ತಿಗೆ ಪರಿಹಾರ ನೀಡಲಾಗಿದೆ. ಆನೆಯನ್ನ ಸಂಬಾಳಿಸುತ್ತಿದ್ದು ನಮ್ಮ ಕರ್ನಾಟಕ ಸರ್ಕಾರ. ಮಾನವೀಯತೆಯನ್ನ ಮೆರೆಯಬಾರದು ಅಂದ್ರೆ ಬಿಜೆಪಿಯವರಿಗೆ ಏನು ಹೇಳಬೇಕು? ಎಂದು ತಿರುಗೇಟು ನೀಡಿದ್ದಾರೆ.

ದಾಳಿ ಮಾಡಿದ್ದ ಆನೆ ಕರ್ನಾಟಕದ್ದು. ಹಾಸನದಲ್ಲಿ ವಶಕ್ಕೆ ಪಡೆದಿದ್ದು, ರೇಡಿಯೋ ಕಾಲರ್ ಕೂಡ ನಮ್ಮ ಇಲಾಖೆಯಿಂದಲೇ ಹಾಕಲಾಗಿತ್ತು. ಅದು ಬೇರೆ ರಾಜ್ಯಕ್ಕೆ ಹೋಗಿ ಒಬ್ಬ ವ್ಯಕ್ತಿ ಮೇಲೆ ದಾಳಿ ಮಾಡಿದ ವರದಿಯಿದೆ. ವರದಿ ತರಿಸಿ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ‌ ರಾಜ್ಯದ ತೆರೆಗೆ ಬೇರೆ ರಾಜ್ಯಕ್ಕೆ ಹೋಗುತ್ತಿಲ್ವಾ?

ಪರಿಹಾರದಿಂದ ನಮ್ಮ‌ ರಾಜ್ಯದ ತೆರೆಗೆ ಬೇರೆ ರಾಜ್ಯಕ್ಕೆ ಹೋಗುತ್ತಿಲ್ವಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕನ್ನಡಿಗರಿಗೆ ಆಗುತ್ತಿರುವ ಇರುವ ಅನ್ಯಾಯ 15 ಲಕ್ಷ ರೂ. ಅಲ್ಲ. 1 ಲಕ್ಷ 77 ಕೋಟಿ ರೂ. ಅನ್ಯಾಯ ಆಗುತ್ತಿದೆ. ಅದರ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ. 15 ಲಕ್ಷದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES