ಬೆಂಗಳೂರು : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್ಗಳ ಬೃಹತ್ ಗೆಲುವು ದಾಖಲಿಸಿದೆ.
ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಆಂಗ್ಲರು ಕೇವಲ 122 ರನ್ಗಳಿಗೆ ಆಲೌಟ್ ಆದರು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತು.
557 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ಅಕ್ಷರಶಃ ನಲುಗಿತು. ಆಂಗ್ಲರ ಪರ ಮಾರ್ಕ್ ವುಡ್ 32 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಕ್ರಾಲಿ 11, ಡಕೆಟ್ 4, ಪೋಪ್ 3, ರೂಟ್ 7, ಬೈರ್ಸ್ಟೋವ್ 4, ನಾಯಕ ಸ್ಟೋಕ್ಸ್ 15, ಪೋಕ್ಸ್ 16, ಹಾರ್ಟ್ಲಿ 16 ರನ್ ಗಳಿಸಿದರು.
ಭಾರತದ ಪರ ತೂಫಾನ್ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಕುಲ್ದೀಪ್ ಯಾದವ್ 2, ಬುಮ್ರಾ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಭಾರತಕ್ಕೆ ಅತಿದೊಡ್ಡ ಟೆಸ್ಟ್ ಗೆಲುವು
434 ರನ್ : ಇಂಗ್ಲೆಂಡ್ (ರಾಜ್‌ಕೋಟ್), 2024
372 ರನ್ : NZ (ಮುಂಬೈ), 2021
337 ರನ್ : SA (ದೆಹಲಿ), 2015
321 ರನ್ : NZ (ಇಂದೋರ್), 2016
320 ರನ್ : ಆಸ್ಟ್ರೇಲಿಯಾ (ಮೊಹಾಲಿ), 2008
It’s @imjadeja with the final breakthrough 😎 #TeamIndia win the 3rd Test by 434 runs! 👏👏
Scorecard ▶️ https://t.co/FM0hVG5X8M#TeamIndia | #INDvENG | @IDFCFIRSTBank pic.twitter.com/A4juPRkWX8
— BCCI (@BCCI) February 18, 2024